ಬಂಟ್ವಾಳ: ಇತಿಹಾಸ ಪ್ರಸಿದ್ಧ ಅಜಿಲಮೊಗರು ಮಾಲಿದ ಉರೂಸ್ ಗೆ ಇಂದಿನಿಂದ ಚಾಲನೆ ದೊರಕಲಿದ್ದು ಜನವರಿ 4 ರಿಂದ ಜನವರಿ 8 ರ ತನಕ ವಿಶೇಷ ಕಾರ್ಯಕ್ರಮಗಳೊಂದಿಗೆ ಉರೂಸ್ ಸಮಾಪ್ತಿಗೊಳ್ಳಲಿದೆ ಎಂದು ಅಜಿಲಮೊಗರು ಜಮಾಅತ್ ಅಧ್ಯಕ್ಷ ಪಿ.ಬಿ ಅಬ್ದುಲ್ ಹಮೀದ್ ಹಾಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನವರಿ 4 ರಂದು ಮಗ್ರಿಬ್ ಬಳಿಕ ಜಲಾಲಿಯ್ಯ ರಾತೀಬ್ ನಡೆಯಲಿದ್ದು ಸೆಯ್ಯದ್ ಜಾಫರ್ ಸ್ವಾದಿಕ್ ತಂಙಳ್ ನೇತೃತ್ವ ನೀಡಲಿದ್ದಾರೆ.
ಜನವರಿ 5 ರಂದು ಗುರುವಾರ ಬೆಳಗ್ಗೆ 8ಕ್ಕೆ ಭಂಡಾರದ ಹರಕೆ ಪ್ರಾರಂಭವಾಗಲಿದ್ದು ಮಗ್ರಿಬ್ ನಮಾಜ್ ನ ಬಳಿಕ ಆಧ್ಯಾತ್ಮಿಕ ಮಜ್ಲೀಸ್ ಗೆ ಸೆಯ್ಯದ್ ಮುಕ್ತಾರ್ ತಂಙಳ್ ನೇತೃತ್ವ ನೀಡಲಿದ್ದಾರೆ.
ರಾತ್ರಿ 11ಕ್ಕೆ ಭಂಡಾರದ ಮಾಲಿದ ವಿತರಣೆ ನಡೆಯಲಿದೆ.
ಜನವರಿ 6 ಬೆಳಗ್ಗೆ 8 ರಿಂದ ಊರ ಪರವೂರ ಮಹನಿಯರಿಂದ ಮಾಲಿದ ಕೊಡುವಿಕೆ ಪ್ರಾರಂಭವಾಗಲಿದೆ ಆ ದಿನ ಮಗ್ರಿಬ್ ಬಳಿಕ ಖ್ಯಾತ ಭಾಷಣಗಾರ ಶಾಫಿ ಲತೀಫಿ ನುಚ್ಯಾಡ್ ರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ಸ್ಥಳೀಯ ಖತೀಬ್ ತ್ವಾಹ ಸಹದಿ ಉದ್ಘಾಟಿಸಲಿದ್ದಾರೆ.
ಜನವರಿ 7 ರಂದು ಬೆಳಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ ಬಳಿಕ ಸಾರ್ವಜನಿಕ ಮಾಲಿದಾ ವಿತರಣೆ ನಡೆಯಲಿದೆ.
ಆ ದಿನ ಮಗ್ರಿಬ್ ಬಳಿಕ ಅಶ್ರಫ್ ರಹ್ಮಾನಿ ಚೌಕಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಸಮಾರೋಪ ಸಮಾರಂಭ ದಿವಸವಾದ ಜನವರಿ 8 ರಂದು ಸಾಮೂಹಿಕ ಪ್ರಾರ್ಥನೆ ಬಳಿಕ ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆ ವರೆಗೆ ಕಂದೂರಿ ಊಟ ವಿತರಣೆ ನಡೆಯಲಿದೆ.
ಕೋವಿಡ್ ನಿಯಮಗಳಂತೆ ಕಾರ್ಯಕ್ರಮ ನಡೆಯಲಿದ್ದು.
ಸಂಜೆ 6 ರ ತನಕ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.
ಟಾಯ್ಸ್, ಫ್ಯಾನ್ಸಿ ಇನ್ನಿತರ ಮನೋರಂಜನ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದು,
ಉಪ್ಪಿನಂಗಡಿ ಮತ್ತು ಬಂಟ್ವಾಳದಿಂದ ಆಗಮಿಸುವ ಭಕ್ತರಿಗೆ ವಿಶೇಷ ಬಸ್ಸುಗಳ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಬ್ದುಲ್ ಹಮೀದ್ ರವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಾವಿರ ಜಮಾಅತ್ ಖತೀಬ್ ತ್ವಾಹ ಸಹದಿ, ಜಮಾಅತ್ ಆಡಳಿತ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿ ಆದಂ ಕುಞಿ, ಆಡಳಿತ ಸಮಿತಿ ಸದಸ್ಯ ಇಬ್ರಾಹಿಂ ಗಂಡಿ ಉಪಸ್ಥಿತರಿದ್ದರು.