ಕಡಬ; ಇನ್ಸ್ಟ್ರಾ ಗ್ರಾಮ್ ನಲ್ಲಿ ಪರಿಚಯವಾದ ಅನ್ಯಕೋಮಿನ ಹೆಣ್ಣನ್ನು ಭೇಟಿಯಾಗಲು ಹೋದ ಕಲ್ಲುಗುಂಡಿಯ ಯುವಕನೊರ್ವನ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಅಟ್ಟಹಾಸ ಮರೆದ ಘಟನೆ ಸುಬ್ರಹ್ಮಣ್ಯ ಬಸ್ಸು ತಂಗುದಾಣದಲ್ಲಿ ಇಂದು ಸಂಭವಿಸಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಅಫ್ರಿದ್ (20) ಎಂದು ಗುರುತಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಸ್ನೇಹಿತನನ್ನು ಭೇಟಿಯಾಗಲೆಂದು ಯುವತಿ ಕರೆಸಿಕೊಂಡಿದ್ದಳು. ಅದರಂತೆ ಸುಬ್ರಮಣ್ಯ ತೆರಳಿದ ಯುವಕನ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ.
ಯುವಕನನ್ನು ಕಟ್ಟಡವೊಂದರಲ್ಲಿ ಕೂಡಿಹಾಕಿ 10 ರಿಂದ 12 ಜನರ ಗುಂಪು ಹಲ್ಲೆ ನಡೆಸಿದೆ. ಇದೇ ವೇಳೆ ಒಬ್ಬಾತ ಚೂರಿಯಿಂದ ಇರಿಯಲು ಯತ್ನಿಸಿದ್ದು, ಇನ್ನೊಬ್ಬಾತ ತಡೆದು, ಮುಂದೆ ನಮ್ಮ ಹುಡುಗಿಯ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಯುವಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ನಿರಂತರವಾಗಿ ದ.ಕ ಜಿಲ್ಲೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಅಟ್ಟಹಾಸ ಮಿತಿ ಮೀರುತ್ತಿದ್ದು ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತುಕೊಂಡಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.