ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು(ರಿ) ಅರ್ಪಿಸುವ ಕ್ರಿಕೆಟ್ ಕಾರ್ನಿವಲ್ 2023 ಇದರ ಟ್ರೋಫಿ ಅನಾವರಣ ಹಾಗೂ 4 ತಂಡಗಳ ಜೆರ್ಸಿ ಬಿಡುಗಡೆ ಕಾರ್ಯಕ್ರಮವು ಹಜಾಜ್ ಸ್ಪೊರ್ಟ್ಸ್ ಕ್ಲಬ್ ಕಲ್ಲಡ್ಕ ದಲ್ಲಿ ಜನವರಿ 06 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಮತ್ತು ಹಿದಾಯ ಫೌಂಡೇಶನ್ ಅಧ್ಯಕ್ಷರಾದ ಹನೀಫ್ ಗೋಲ್ತಮಜಲು ಹಾಗೂ ಆಸಿಫ್ ಹೋಂ ಪ್ಲಸ್ ರವರು ಮಾತನಾಡಿ 4 ತಂಡಕ್ಕೂ ಶುಭಹಾರೈಸಿದರು.
ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ವಳಾಲ್, ಡಾ.ಸಿದ್ದೀಕ್ ಅಡ್ಡೂರು, ಇಮ್ತಿಯಾಜ್ ಐಮೇಡ್, ಶರೀಫ್ ಅಬ್ಬಾಸ್ ವಳಾಲ್, ಶಾಹಿದ್ ಕಲ್ಲಡ್ಕ, ಶಂಸು ಪರ್ಲಡ್ಕ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಟ್ರೊಫಿ ಅನಾವರಣ ಹಾಗೂ ಜೆರ್ಸಿ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ನಂತರ 4 ತಂಡದ ಆಟಗಾರರಿಂದ ರಾಂಪ್ ವಾಕ್ ನಡೆಯಿತು.
ಇಮ್ತಿಯಾಝ್ ಹಜಾಜ್ ಹಾಗೂ ಸಿರಾಜ್ ಎರ್ಮಾಳ್ ಕ್ರಿಕೆಟ್ ಪಂದ್ಯಕೂಟದ ನಿಯಮಾವಳಿಗಳನ್ನು ವಿವರಿಸಿದರು.
ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಫೈಝಲ್ ಪೂಮ ಸ್ವಾಗತಿಸಿದರೆ, ಸಿರಾಜ್ ಪರ್ಲಡ್ಕ ಹಾಗೂ ಝುಲ್ಫಿ ಬ್ಯಾರಿ ವಂದನಾರ್ಪಣೆಗೈದರು.
ದಿನಾಂಕ 08/01/2023 ರಂದು ಭಾನುವಾರ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಕೂಟ ನಡೆಯಲಿದ್ದು, 4 ಬಲಿಷ್ಟ ತಂಡಗಳು ಸೆಣಸಾಟಕ್ಕೆ ಸಜ್ಜಾಗಿ ನಿಂತಿದೆ.
ಬೆಳಗ್ಗೆ 7:00ರಿಂದ ಸಂಜೆ 6:00 ರ ತನಕ ಪಂದ್ಯಾಕೂಟ ನಡೆಯಲಿದ್ದು, ಬೆದ್ರಾ ಮೀಡಿಯಾ ಯುಟ್ಯೂಬ್ ಚಾನಲ್’ನಲ್ಲಿ ನೇರಪ್ರಸಾರ ಇರಲಿದೆ. ಸ್ನೇಹಿತರಿಂದ ಸ್ನೇಹಿತರಿಗಾಗಿ ಸ್ನೇಹಿತರಿಗೋಸ್ಕರ ನಡೆಸುವ ಈ ಕೂಟದಲ್ಲಿ ಪ್ರೇಕ್ಷಕರು ಭಾಗವಹಿಸುವ ಮೂಲಕ ಕ್ರಿಕೆಟ್ ಪಂದ್ಯ ಮತ್ತಷ್ಟು ಯಶಸ್ವಿಗೊಳಿಸಿ ಎಂದು ಸಂಘಟಕರು ವಿನಂತಿಸಿದ್ದಾರೆ.
ಭಾಗವಹಿಸುವ ತಂಡಗಳು:
ರಿಯಾಝ್ ಕಣ್ಣೂರು ಮಲಕತ್ವದ A1 Fighters
ಸೈಫ್ ಸುಲ್ತಾನ್ ಮಾಲಕತ್ವದ Coastal Knight Riders
ಸಿರಾಜ್ ಪರ್ಲಡ್ಕ ಮಾಲಕತ್ವದ Royal Hunters
ಸಾಜಿದ್ ಒಡೆಯರ್ ಮಾಲಕತ್ವದ Coastal Royal Kings.