dtvkannada

'; } else { echo "Sorry! You are Blocked from seeing the Ads"; } ?>

ನಟ ಶಾರುಖ್​ ಖಾನ್​ ಅವರ ಹೊಸ ಇನ್ನಿಂಗ್ಸ್​ ಶುರು ಆಗಿದೆ. ಇಂದು (ಜ.25) ಅವರ ವೃತ್ತಿಜೀವನದ ಮೆರುಗು ಹೆಚ್ಚಿದೆ. ಹಲವು ವರ್ಷಗಳಿಂದ ಅವರು ಕಾಯುತ್ತಿದ್ದ ಮೆಗಾ ಹಿಟ್​ ಈಗ ಅವರಿಗೆ ಸಿಕ್ಕಿದೆ. ಕಿಂಗ್​ ಖಾನ್​ ಅಭಿಮಾನಿಗಳು ಎಲ್ಲ ಚಿತ್ರಮಂದಿರಗಳಲ್ಲಿ ಹಬ್ಬ ಮಾಡುತ್ತಿದ್ದಾರೆ. ‘ಪಠಾಣ್​’ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸ್​ ಆಫೀಸ್​ ಲೆಕ್ಕ ಕೂಡ ಸಿಕ್ಕಿದೆ.

ಅಚ್ಚರಿ ಎಂದರೆ, ಬಿಡುಗಡೆಯಾಗಿ ಕೆಲವೇ ಶೋಗಳು ಪೂರ್ಣಗೊಳ್ಳುವ ಮುನ್ನ ಈ ಚಿತ್ರ ಬರೋಬ್ಬರಿ 20 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

ಬಾಲಿವುಡ್ನಲ್ಲಿ ಬಿಡುಗಡೆ ಆಗುವ ಎಲ್ಲ ಸಿನಿಮಾಗಳ ಕಲೆಕ್ಷನ್ ಲೆಕ್ಕವನ್ನು ತರಣ್ ಆದರ್ಶ್ ಬಹಿರಂಗಪಡಿಸುತ್ತಾರೆ. ಅವರು ನೀಡುವ ಅಪ್ಡೇಟ್ಗಾಗಿ ನೆಟ್ಟಿಗರು ಕಾದಿರುತ್ತಾರೆ. ನಿನ್ನೆ ತರಣ್ ಆದರ್ಶ್ ಅವರು ‘ಪಠಾಣ್’ ಸಿನಿಮಾದ ಮಧ್ಯಾಹ್ನದ ಮೂರು ಗಂಟೆವರೆಗಿನ ಬಾಕ್ಸ್ ಆಫೀಸ್ ಅಪ್ಡೇಟ್ ನೀಡಿದ್ದಾರೆ. ಅದರ ಅನ್ವಯ ಭಾರತದಲ್ಲಿ ಕೇವಲ ಮಲ್ಲಿಪ್ಲೆಕ್ಸ್ನಿಂದ 20.35 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

‘ಪಿವಿಆರ್’ ಸ್ಕ್ರೀನ್ಗಳಲ್ಲಿ 9.40 ಕೋಟಿ ರೂಪಾಯಿ, ಐನಾಕ್ಸ್ನಲ್ಲಿ 7.05 ಕೋಟಿ ರೂಪಾಯಿ ಹಾಗೂ ಸಿನಿಪೊಲಿಸ್ನಲ್ಲಿ 3.90 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಇದು ನಿನ್ನೆ ಮಧ್ಯಾಹ್ನದವರೆಗಿನ ಲೆಕ್ಕ ಮಾತ್ರ. ಸಂಜೆಯ ಶೋಗಳು ಕೂಡ ಹೌಸ್ ಪುಲ್ ಆಗಿತ್ತು. ನೈಟ್ ಶೋ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಇದರ ಜೊತೆ ಏಕಪರದೆ ಚಿತ್ರಮಂದಿರಗಳ ಕಲೆಕ್ಷನ್ ಕೂಡ ಸೇರಿದರೆ ‘ಪಠಾಣ್’ ಹೊಸ ದಾಖಲೆ ಬರೆಯುವ ಸಾಧ್ಯತೆ ದಟ್ಟವಾಗಿದೆ.

'; } else { echo "Sorry! You are Blocked from seeing the Ads"; } ?>

ಪಠಾಣ್’ ಸಿನಿಮಾದಲ್ಲಿ ಅದ್ದೂರಿ ಸಾಹಸ ದೃಶ್ಯಗಳು ಗಮನ ಸೆಳೆಯುತ್ತಿವೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಬಹುತೇಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಯಿ ಮಾತಿನ ಪ್ರಚಾರದಿಂದಾಗಿ ಸಿನಿಮಾದ ಗಲ್ಲಾಪೆಟ್ಟಿಗೆ ಭದ್ರವಾಗುತ್ತಿದೆ. ಒಟ್ಟಿನಲ್ಲಿ, ಶಾರುಖ್ ಖಾನ್ ಅವರು ಭರ್ಜರಿಯಾಗಿಯೇ ಕಮ್ಬ್ಯಾಕ್ ಮಾಡಿದ್ದು, ಗೆಲುವಿನ ನಗು ಬೀರಿದ್ದಾರೆ.

ಅಡ್ವಾನ್ಸ್‌ ಬುಕಿಂಗ್‌ ನಲ್ಲಿ ಕೆಜಿಎಫ್‌ -2 ಸಿನಿಮಾವನ್ನೇ ಮೀರಿಸಿದ ʼಪಠಾಣ್‌ʼ ಭಾರತದಲ್ಲಿ ಮೊದಲ ದಿನವೇ 54 ಕೋಟಿ‌ ರೂ. ಗಳಿಸಿದ್ದು, ಆಲ್‌ ಟೈಮ್‌ ರೆಕಾರ್ಡ್‌ ಮಾಡಿದೆ ಎಂದು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್‌ ಮಾಡಿದ್ದಾರೆ.

ಮೊದಲ ದಿನವೇ ಆಸ್ಟ್ರೇಲಿಯಾದಲ್ಲಿ $600k ( 4,89,18,300.00 ರೂ.) ಮತ್ತು USA ನಲ್ಲಿ $1 ಮಿಲಿಯನ್ ( ಬುಧವಾರ ಮಧ್ಯಾಹ್ನದವರೆಗೆ) ಕಲೆಕ್ಷನ್‌ ಮಾಡಿದೆ ಎಂದಿದ್ದಾರೆ.

ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅವರು ಸೂಪರ್ ಹಿಟ್ ‘ವಾರ್’ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಚಿತ್ರದ ದಾಖಲೆಯನ್ನು ‘ಪಠಾಣ್’ ಅಳಿಸಿ ಹಾಕುತ್ತಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ ನಾಲ್ಕನೇ ಸಿನಿಮಾ ಎಂಬ ಕಾರಣದಿಂದಲೂ ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ಜಾನ್ ಅಬ್ರಾಹಂ ಮಾಡಿರುವ ವಿಲನ್ ಪಾತ್ರ ಕೂಡ ಪವರ್ಫುಲ್ ಆಗಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!