ಶಿಕೊಹಾಬಾದ್: ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿರುವ ಸ್ಲೀಪರ್ ಬಸ್‌ನಲ್ಲಿ 14 ವರ್ಷದ ಬಾಲಕಿಯ ಮೇಲೆ ಬಸ್ ಕಂಡಕ್ಟರ್ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯ ತಾಯಿಯನ್ನು ಅದೇ ಬಸ್ ನಲ್ಲಿದ್ದ ಮತ್ತೊಬ್ಬ ಕಂಡಕ್ಟರ್ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಸೋಮವಾರ ಕಾನ್ಪುರಕ್ಕೆ ತೆರಳುವ ಸ್ಲೀಪರ್ ಬಸ್ ದೆಹಲಿಯ ಬದರ್‌ಪುರ ಗಡಿಯಿಂದ ಹೊರಟು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಆಗ್ರಾಕ್ಕೆ ಹೋಗುತ್ತಿದ್ದಾಗ ಅತ್ಯಾಚಾರ ನಡೆದಿದೆ. ಸಂತ್ರಸ್ತೆ ಮತ್ತು ಆಕೆಯ ತಾಯಿ ಶಿಕೊಹಾಬಾದ್‌ನಲ್ಲಿ ಇಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಬಸ್ಸನ್ನು ವಶಪಡಿಸಿಕೊಂಡಿದ್ದು ಪ್ರಮುಖ ಆರೋಪಿಯನ್ನು ಅನ್ಶು ಎಂದು ಗುರುತಿಸಲಾಗಿದೆ.
ಹಿಂದಿ ದಿನಪತ್ರಿಕೆಯಾದ ಹಿಂದುಸ್ತಾನ್ ವರದಿಯ ಪ್ರಕಾರ ಪೊಲೀಸರು ಈಗ ಸಂತ್ರಸ್ತೆ, ಆಕೆಯ ತಾಯಿ ಮತ್ತು ಇತರ ಬಸ್ ಪ್ರಯಾಣಿಕರನ್ನು ವಿಚಾರಣೆ ನಡೆಸುತ್ತಿದ್ದಾರೆ.ಕೃತ್ಯವೆಸಗಿದ ನಂತರ ಇಬ್ಬರು ಆರೋಪಿಗಳು ಬೇರೆ ಬೇರೆ ಸ್ಥಳಗಳಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದಾರೆ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಈ ಘಟನೆ ದೆಹಲಿಯಿಂದ ಕಾನ್ಪುರಕ್ಕೆ ಹೋಗುತ್ತಿದ್ದ ಬಸ್ ನಲ್ಲಿ ನಡೆದಿತ್ತುಪ್ರಮುಖ ಆರೋಪಿ ಅನ್ಶುವನ್ನು ಇಟವಾದಲ್ಲಿರುವ ಸಿರಸಗಂಜ್‌ನಿಂದ ಪೊಲೀಸರು ಬಂಧಿಸಿದ್ದಾರೆ. ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.