ಪುತ್ತೂರು:ಇತ್ತೀಚೆಗೆ ನಮ್ಮಿಂದಗಲಿದ ರಾಜಕೀಯ ದುರೀಣ,ಧಾರ್ಮಿಕ ಮುಂದಾಳು ಜನಾಬ್ ದರ್ಬೆ ಯಾಕೂಬ್ ಹಾಜಿ ಯವರ ನಿಧನದ ಮೂರನೇ ದಿನದಂದು ಅಗಲಿದವರ ಸ್ಮರಣೆ ಬದ್ರಿಯಾ ಮಸೀದಿ ಪುತ್ತೂರಿನಲ್ಲಿ ಜರಗಿತು.
ಸ್ಥಳೀಯ ಇಮಾಂ ಶೈಖುನಾ ಅಬ್ಬಾಸ್ ಪೈಝಿ ಪುತ್ತಿಗೆ ಪ್ರಾರ್ಥನೆಗೆ ನೇತೃತ್ವ ನೀಡಿ ಅಗಲಿದವರ ಪರಲೋಕ ಮೋಕ್ಷಕ್ಕಾಗಿ ದುವಾ ನಡೆಸಿದರು.ಅಗಲಿದ ಯಾಕೂಬ್ ರವರು ತನ್ನ ಜೀವಿತದಲ್ಲಿ ಬಡವರ ಸಹಾಯಕರಾಗಿ,ಮಸೀದಿ ಏಳಿಗೆಗಾಗಿ ಶ್ರಮಿಸಿದವರಾಗಿದ್ದಾರಲ್ಲದೆ ರಾಜಕೀಯವಾಗಿ ತನ್ನ ಸರ್ವಸ್ವವನ್ನೆ ತ್ಯಾಗಮಾಡಿದವರೂ ಆಗಿದ್ದರು,ಕುಟುಂಬದ ಒಗ್ಗಟ್ಥಿನ ಮೂಲ ಪಾತ್ರದಾರಿಯೂ ಯಾಕೂಬ್ ಆಗಿದ್ದರು,ಇವರ ಅಗಲುವಿಕೆ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ, 3 ಮಕ್ಕಳಲ್ಲಿ ಒಂದು ಗಂಡು ಮಗ ಶಕೀಲ್ ಪುತ್ತೂರಿನ ದರ್ಬೆಯಲ್ಲಿ ನಡೆಸುತ್ತಿದ್ದು ತಂದೆಯ ಹಾಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುವವರಾಗಿದ್ದಾರೆ
ಅನ್ಸಾರುದ್ದೀನ್ ಜಮಾತ್ ಸಮಿತಿಯ ಉಪಾಧ್ಯಕ್ಷರಾಗಿ ಬಹಳಷ್ಟು ಕಾಳಜಿಯಿಂದ ಕೆಲಸ ಮಾಡಿದ ಯಾಕೂಬ್ ಹಾಜಿಯವರು ಪ್ರತಿಷ್ಟಿತ ದರ್ಬೆ ಮೊಯಿದಿನ್ ಪ್ಯಾಮಿಲಿಯ ಹಿರಿಯ ಸದಸ್ಯರಾಗಿ ರಾಜಕೀಯ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಗೈದು ಜನಾನುರಾಗಿಯಾಗಿದ್ದರು ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅದ್ಯಕ್ಷರಾದ ಹಾಜಿ ಎಸ್ ಬಿ ದಾರಿಮಿ ಸ್ಮರಿಸಿದರಲ್ಲದೇ ಇತ್ತೀಚೆಗೆ ನಿಧನರಾದ ದೀರ್ಘ ಕಾಲ ಜಮಾತ್ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ ಹುಸೈನ್ ಕೆನರಾ ರವರ ಸೇವೆಯು ಕೂಡಾ ಪುತ್ತೂರಿನಲ್ಲಿ ಅಮೋಘವಾಗಿತ್ತು ಎಂದರು.
ಸಾಲ್ಮರ ಖತೀಬ್ ಉಮರ್ ದಾರಿಮಿಯವರು ಮಾತನಾಡಿ ಯಾಕೂಬ್ ಹಾಜಿ ಮತ್ತು ಹುಸೈನ್ ಕೆನರಾರವರ ಪರೋಪಕಾರ ಗುಣವನ್ನು ಸ್ಮರಿಸಿ ಅವರ ಪರಲೋಕ ಜೀವನಕ್ಕೂ ಅದು ಪ್ರಯೋಜನವಾಗಲಿ ಎಂದು ಪ್ರಾರ್ಥಿಸಿದರು.ಜಮಾತ್ ಅದ್ಯಕ್ಷ ಎ ಲ್ ಟಿ ರಝಾಕ್ ಹಾಜಿ ಮಾತನಾಡಿ ಅನ್ಸಾರುದ್ದೀನ್ ಜಮಾತ್ ಗಾಗಿ ಈ ಹಿಂದೆ ದುಡಿದ ಎಲ್ಲಾ ಮಹಾನುಬಾವರನ್ನು ಸ್ಮರಿಸಿದರು.
ವಿದ್ಯಾಬ್ಯಾಸ ಬೋರ್ಡ್ ಸದಸ್ಯ ರಶೀದ್ ಹಾಜಿ ಪರ್ಲಡ್ಕ,ಜಮಾತ್ ಕಾರ್ಯದರ್ಶಿ ಯಾಕುಬ್ ಖಾನ್,ಕೋಶಾಧಿಕಾರಿ ಇಸ್ಮಾಯಿಲ್ ಸಾಲ್ಮರ, ಉಪಾದ್ಯಕ್ಷರಾದ ಅಬ್ದುಲ್ಲ ಕೆ ಎಂ ಕೂರ್ನಡ್ಕ, ದರ್ಬೆ ಮಸೀದಿ ಅದ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಶೇಖ್ ಝೈನುದ್ದೀನ್,ಅಬ್ದುಲ್ ಹಮೀದ್ ಸಾಲ್ಮರ,ಅಬ್ದುಲ್ ರಹಿಮಾನ್ ಗಾರ್ಬಲ್ ಮಾಜಿ ಅದ್ಯಕ್ಷ ಯು ಅಬ್ದುಲ್ಲ ಹಾಜಿ, ನ್ಯಾಯವಾದಿ ನೂರುದ್ದೀನ್ ಸಾಲ್ಮಾರ,ಹನೀಫ್ ಕಲ್ಲೆಗ,ಸಿದ್ದೀಕ್ ಕಲ್ಲೆಗ,ಉಮ್ಮರ್ ಹೊಲೋ ಬ್ಲಾಕ್ ,ಅಶ್ರಫ್ ಗೊಳಿಕಟ್ಥೆ,ರಹಿಮಾನ್ ಎ.ಪಿ.ಎಮ್.ಸಿ.,ನೌಷದ್ ಹಾಜಿ ಬೊಳ್ವಾರ್ ,ಬೊಳುವಾರು ಇಮಾಂ ಕರೀಂ ದಾರಿಮಿ ಕುಂಬ್ರ, ಮುಪತ್ತಿಷ್ ಅಬ್ದುಲ್ ಅಝೀಝ್ ಹಾಜಿ ಮೊಟ್ಟೆತಡ್ಕ,ಸಿಟಿ ಬಜಾರ್ ಹಸನಾಜಿ,ಸುಲೈಮಾನ್ ಹಾಜಿ ಸಾಲ್ಮರ ದಾರಿಮಿ,ಅನ್ವರ್ ಮುಸ್ಲಿಯಾರ್,ಇಬ್ರಾಹಿಂ ಮುಸ್ಲಿಯಾರ್,ಹಾಗೂ ಇನ್ನಿತರ ಹಲವು ಉಲಮಾ -ಉಮರಾ ನಾಯಕರು, ಅನ್ಸಾರುದ್ದೀನ್ ಜಮಾತ್ ಸಮಿತಿ ಪಧಾಧಿಕಾರಿಗಳು,ಬಪ್ಪಳಿಗೆ ಮಸೀದಿ ಸಮೀತಿಯ ಹುಸೈನ್ ಬಪ್ಪಳಿಗೆ ಯಾಕೂಬ್ ಸಹೋದರರಾದ ,ಬಶೀರ್ ದರ್ಬೆ,ಉಸ್ಮಾನ್ ದರ್ಬೆ, ರಫೀಕ್ ದರ್ಬೆ ,ಅರ್ಶದ್ ದರ್ಬೆ,ಫಾರೂಕ್ ಕೊಡಿಪ್ಪಾಡಿ,ಆರಿಸ್ ಪರ್ಲಡ್ಕ,ಝೀಯಾದ್ ದರ್ಬೆ,ರಮೀಝ್ ಹಟ್ಟಾ ,ರಾಹಿಲ್ ಹಟ್ಥಾ,ಹಂಝ ಮರೀಲ್ ,ಆದಮ್ ಕುಂಞಿ ಸಂಪ್ಯ ,ಕುಂಞಾಲಿಚ್ಚ ಸಾಲ್ಮಾರ ,ಇಬ್ರಾಹಿಮ್ ಚೊಯಿಸ್,ಜಮಾಲ್ ಮೊಬೈಲ್,ಜಮಾಲ್ ಮರೀಲ್,ಹೈದರ್ ಮರೀಲ್,ಮಮ್ಮದ್ ಕುಂಜೂರ್ ,ಮಜೀದ್ ಕುಂಜೂರು,ನವಾಝ್ ಕುಂಜೂರ್, ಯಾಕುಬ್ ದರ್ಬೆಯವರ ಕುಟುಂಬಿಕರು,ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದರು.