ಚಿಕ್ಕಬಳ್ಳಾಪುರ: ಮನೆ ಮುಂದೆ ಆಟವಾಡುತ್ತಿದ್ದ 4 ವರ್ಷದ ಬಾಲಕನ ಮೇಲೆ ಕಾರು ಹರಿದು ಬಾಲಕ ಮೃತಪಟ್ಟ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಟ್ಯಾಂಕ್ಬಂಡ್ ರಸ್ತೆ ಬಳಿ ಜರುಗಿದೆ.
ವೆಂಕಟೇಶ್ವರ ಹಾಗೂ ಮೋನಿಕಾ ದಂಪತಿ ಪುತ್ರ ಗೀತಿಕ್ (4) ಮೃತಪಟ್ಟ ದುರ್ದೈವಿ ಬಾಲಕ. ಮಗು ಮೇಲೆ ಕಾರು ಹರಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಸೇರಿಸಿ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ.
ಚಿಂತಾಮಣಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಾರು ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.