ಮಂಗಳೂರು: ರಾಷ್ಟ್ರೀಯ ವಿಧ್ಯಾವಿಭೂಷಣ ಪ್ರಶಸ್ತಿಪಡೆದ ಇಕ್ಬಾಲ್ ಬಾಳಿಲರಿಗೆ ಹಝ್ರತ್ ಸಾದಾತ್ ವೃದ್ದಾಶ್ರಮದಲ್ಲಿ ಇತ್ತೀಚೆಗೆ ಶಾಲು ಹೊದಿಸಿ ಗೌರವಿಸಲಾಯಿತು. ಸೌಹಾರ್ದ ನಾಡಿಗಾಗಿ ಭಾಷಣ ಬರಹಗಳ ಮೂಲಕ ಜಾಗೃತಿ ಮೂಡಿಸಿ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ನೀಡಿದ ಇಕ್ಬಾಲ್ ಬಾಳಿಲರಿಗೆ ಬೆಳಗಾವಿಯಲ್ಲಿ ಸಿರಿಗನ್ನಡ ವೇದಿಕೆಯು ರಾಷ್ಟ್ರೀಯ ವಿಧ್ಯಾವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.ಪ್ರಶಸ್ತಿ ಪಡೆದ ಸಂತೋಷವನ್ನು ಹಂಚಿಕೊಂಡ ಹಝ್ರತ್ ಸಾದಾತ್ ವೃದ್ದಾಶ್ರಮದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಇಕ್ಬಾಲ್ ಬಾಳಿಲ, ರಸ್ತೆ ಬದಿಯಲ್ಲಿ ಯಾರು ಇಲ್ಲದೆ ಅನಾಥವಾಗಿ ಬಿದ್ದಿರುವ ವೃದ್ದರನ್ನು ಕರೆತಂದು ಅವರಿಗೆ ಸುಸಜ್ಜಿತ ಸವಲತ್ತುಗಳನ್ನು ಒದಗಿಸಿ ಪ್ರತೇಕವಾಗಿ ದಿನದ ಹೆಚ್ಚು ಸಮಯಗಳು ಇಬಾದತ್‌ಗಾಗಿ ಮೀಸಲಿಡುವ ಸಮುದಾಯದ ಏಕೈಕ ಆಶ್ರಮ ಇದಾಗಿರುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಹಝ್ರತ್ ಸಾದಾತ್ ವೃಧ್ಧಾಶ್ರಮದ ಸಂಸ್ಥಾಪಕರಾದ ಮುಹಮ್ಮದ್ ಶಾಫಿ ಮದಾರಿ,ನೌಶಾದ್ ಹಾಜಿ ಸೂರಲ್ಪಾಡಿ, ಆಸಿಫ್ ಆದರ್ಶ್, ಮೌಲಾನಾ ದಾನಿಶ್ ರಝಾ ರಝ್ವಿ ಅನವಟ್ಟಿ ನಸೀರ್ ಸಾಹೇಬ್ ಕೊಂಬಗುಡ್ಡೆ, ಜಾಫರ್ ಕಟ್ಪಾಡಿ ಸೇರಿದಂತೆ ಹಲವಾರು ಉಮರಾ ನಾಯಕರು ಉಪಸ್ಥಿತರಿದ್ದರು.