ನಾನು ಪುತ್ತೂರಿನ ಕಮ್ಯೂನಿಟಿ ಸೆಂಟರ್’ಗೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯವೈಖರಿಯನ್ನು ಕಂಡು ಸಂತೋಷ ಮತ್ತು ಆಶ್ಚರ್ಯಕರವಾಯಿತು.
ಜ್ಞಾನ -ಕೌಶಲ್ಯ ಮತ್ತು ಪ್ರತಿಭೆಯನ್ನು ಯಾವ ರೀತಿ ಉಪಯೋಗಿಸಬಹುದು, ಪ್ರಪಂಚದ ಪ್ರಸ್ತುತ ಬೆಳವಣಿಗೆ ಮತ್ತು ತಂತ್ರಜ್ಞಾನದಿಂದಾಗಿ ಯುವ ತಲೆಮಾರಿಗೆ ಸಿಗುವ ಸ್ಪರ್ಧೆ, ಅವಕಾಶ ಮತ್ತು ಬೆದರಿಕೆಗಳ ಕುರಿತಂತೆ ವಿದ್ಯಾರ್ಥಿಗಳಿಗೆ ವಿವರಿಸುವುದು. ದಾರಿತಪ್ಪುತ್ತಿರುವ ವಿದ್ಯಾರ್ಥಿಗಳನ್ನು ಸರಿ ದಾರಿಗೆ ತಂದು ಶಿಕ್ಷಣದ ಕಡೆ ಗಮನ ಹರಿಸುವಂತದ್ದು, ವಿದ್ಯೆಯನ್ನು ಮೊಟಕುಗೊಳಿಸಿದ ವಿದ್ಯಾರ್ಥಿಗಳನ್ನು ಕೌನ್ಸಿಲಿಂಗ್ ಮಾಡಿ ಮತ್ತೆ ಮುಂದುವರಿಯುಂತೆ ಮಾಡುವ ಪ್ರಯತ್ನ, ಯಾವ ಯಾವ ಕೋರ್ಸ್ ಗಳಿಂದ ಯಾವ ಪದವಿಗಳನ್ನು ಪಡೆಯಬಹುದು, ಕಲಿಕೆಯ ಮುಂಚಿತವಾಗಿ ಯಾವ ರೀತಿ ಗುರಿಯನ್ನು ಹೊಂದಿರಬೇಕು ಎಂಬಂತಹ ಮಾರ್ಗದರ್ಶನ ನೀಡುವ ಪುತ್ತೂರು ಕಮ್ಯೂನಿಟಿ ಸೆಂಟರ್ ಕೆಲಸ ಅಚ್ಚರಿದಾಯಕವಾದದ್ದು
ಕಮ್ಯುನಿಟಿ ಸೆಂಟರ್ ಪುತ್ತೂರು ಈಗಾಗಲೇ ತನ್ನ ಸಂಸ್ಥೆಯಲ್ಲಿ 1400 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸಂಪರ್ಕದಲ್ಲಿಟ್ಟುಕೊಂಡು ಅವರಿಗೆ ಮಾರ್ಗದರ್ಶನ ನೀಡುತ್ತಿದೆ. ಈಗಾಗಲೇ ಸಂಸ್ಥೆಯಲ್ಲಿ 40 ಕ್ಕಿಂತ ಹೆಚ್ಚು ಅವರಿಗೆ ಮಾರ್ಗದರ್ಶನ ನೀಡುತ್ತಿದೆ. ಈಗಾಗಲೇ ಸಂಸ್ಥೆಯಲ್ಲಿ 40 ಕ್ಕಿಂತ ಹೆಚ್ಚು ಶಿಕ್ಷಕಿಯರು ದುಡಿಯುತ್ತಿದ್ದಾರೆ.
250 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಶುಲ್ಕ ನೀಡಲಾಗಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ 50 ವಿದ್ಯಾರ್ಥಿಗಳನ್ನು ಸಂಸ್ಥೆಯು ದತ್ತು ಪಡೆದುಕೊಂಡಿದೆ. ಅವರನ್ನು ನಿರಂತರ ಸಂಪರ್ಕಿಸಲು ನುರಿತ ಶಿಕ್ಷಕಿಯರನ್ನು ಇಟ್ಟು ಅವರಿಗೆ ಬೇಕಾದ ಶೈಕ್ಷಣಿಕ ನೆರವು, ಸಬ್ಜೆಕ್ಟ್ ಟ್ಯೂಷನ್ ನೀಡಲಾಗುತ್ತದೆ.
ಡ್ರಾಪೌಟ್ ವಿದ್ಯಾರ್ಥಿಗಳನ್ನು ಮರಳಿ ಶಾಲಾ ಕಾಲೇಜುಗಳಿಗೆ ಸೇರಿಸಲಾಗುತ್ತಿದೆ. ಈ ಎಲ್ಲಾ ರೀತಿಯ ಪ್ರಯತ್ನವು ಕೆಲವು ವರ್ಷಗಳ ಕಳೆದ ಹಲವಾರು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಪ್ರಯತ್ನಕ್ಕೆ ಇನ್ನಷ್ಟೂ ಶಕ್ತಿ ನೀಡಿದೆ.
ಪುತ್ತೂರು ಕಮ್ಯುನಿಟಿ ಸೆಂಟರಿನ ಈ ಉತ್ತಮ ಪ್ರಯತ್ನ ನಿರಂತರವಾಗಿರಲಿ, ಮತ್ತು ಸಮಾಜಕ್ಕೆ ಮಾದರಿಯಾಗಲಿ ಎಂದು ಆಶಿಸುತ್ತಿದ್ದೇನೆ