dtvkannada

'; } else { echo "Sorry! You are Blocked from seeing the Ads"; } ?>

ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದ ಟೀಂ ಇಂಡಿಯಾ ನಾಲ್ಕನೇ ದಿನದ ಆರಂಭದಲ್ಲೇ ಪಂದ್ಯ ಮುಗಿಸಿದೆ. 372 ರನ್ ಅಂತರದಿಂದ ಪಂದ್ಯ ಜಯಿಸಿದ ಭಾರತ ತಂಡ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.

ಇಂದು ನಾಲ್ಕನೇ ದಿನ ಜಯಂತ್ ಯಾದವ್ ನ್ಯೂಜಿಲೆಂಡ್​ಗೆ ಮಾರಕವಾಗಿ ಪರಿಣಮಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 140 ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಹೆನ್ರಿ ನಿಕೋಲ್ಸ್ ಮತ್ತು ರಚಿನ್ ರವೀಂದ್ರ ಇನ್ನಿಂಗ್ಸ್ ಆರಂಭಿಸಿದ ಕೆಲವೇ ಓವರ್​ಗಳಲ್ಲಿ ಬೌಲಿಂಗ್ ಮಾಡಲು ಬಂದ ಜಯಂತ್ ನಾಲ್ಕನೇ ದಿನದ ಹೀರೋ ಆದರು.

'; } else { echo "Sorry! You are Blocked from seeing the Ads"; } ?>

ಈ ಮೂಲಕ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ನ್ಯೂಜಿಲೆಂಡ್ ತನ್ನ ಹಳೇ ಕೆಟ್ಟ ದಾಖಲೆಯನ್ನು ಈ ಬಾರಿಯೂ ಮುಂದುವರೆಸಿದೆ. ರಾಂಚಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.

— BCCI (@BCCI) December 6, 2021

ಈ ಪಂದ್ಯದಲ್ಲಿ ಮೊದಲು ಮಳೆ ಕಾಟದ ನಡುವೆಗೂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಭಾರತ ತಂಡ ಮೊದಲ ಇನಿಂಗ್ಸ್​ನಲ್ಲಿ 325 ರನ್ ಗಳಿಸಿ, ಬಳಿಕ ಕಿವೀಸ್ ಪಡೆಯನ್ನು ಪ್ರಥಮ ಇನಿಂಗ್ಸ್​ನಲ್ಲಿ 62 ರನ್​ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಮಾಡಿತು. ಫಾಲೋ ಆನ್ ಹೇರದೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 69 ರನ್​ಗಳಿಸಿತ್ತು.

ಮೂರನೇ ದಿನದಾಟ ಆರಂಭಿಸಿದ ಭಾರತ ಪರ ಮಯಾಂಕ್ ಅಗರ್ವಾಲ್ (62ರನ್, 108 ಎಸೆತ, 9ಬೌಂಡರಿ, 1 ಸಿಕ್ಸರ್) ಹಾಗೂ ಚೇತೇಶ್ವರ ಪೂಜಾರ (47 ರನ್, 97 ಎಸೆತ, 6 ಬೌಂಡರಿ, 1 ಸಿಕ್ಸರ್) ಜೋಡಿ ಉತ್ತಮ ಲಯ ಕಂಡುಕೊಂಡಿತು. ಇದರ ನಡುವೆಯೂ ಅಜಾಜ್ ಪಟೇಲ್ (106ಕ್ಕೆ 4) ಹಾಗೂ ರಚಿನ್ ರವೀಂದ್ರ (56ಕ್ಕೆ 3) ಮಾರಕ ದಾಳಿಯಿಂದ ಗಮನಸೆಳೆದರು. ಬಳಿಕ ಉತ್ತಮ ಟಾರ್ಗೆಟ್ ಪೇರಿಸಿದ ಹಿನ್ನೆಲೆಯಲ್ಲಿ ಭಾರತ ತಂಡ 7 ವಿಕೆಟ್ಗೆ 276 ರನ್ಗಳಿಸಿ ಎರಡನೇ ಇನಿಂಗ್ಸ್ಗೆ ಡಿಕ್ಲೇರ್ ಘೋಷಿಸಿತ್ತು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!