';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು : ಕಳೆದ 15 ದಿನಗಳಿಂದ ಸುರತ್ಕಲ್ ನಲ್ಲಿ ಅವೈಜ್ಞಾನಿಕ ಟೋಲ್ ಸಂಗ್ರಹದ ವಿರುದ್ಧ ಟೋಲ್ಗೇಟ್ ಪಕ್ಕದಲ್ಲಿ ನ್ಯಾಯಯುತವಾಗಿ ಆಹೋ ರಾತ್ರಿ ಹೋರಾಟ ನಡೆಸುತ್ತಿದ್ದ ಆಸಿಫ್ ಆಪತ್ಭ್ಬಾಂದವರನ್ನು ಇಂದು ಪೋಲಿಸರು ಸುಳ್ಳು ಕೇಸನ್ನು ದಾಖಲಿಸಿ ಬಂಧಿಸಿದ್ದರು.
ಬಂಧನದಿಂದ ಬಿಡುಗಡೆಗೊಳಿಸುವ ವಿಚಾರವಾಗಿ ಎಸ್ ಡಿಪಿಐ ನಿಯೋಗವು ಪೊಲೀಸ್ ಆಯುಕ್ತರೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ ಹೋರಾಟಗಾರ ಆಸಿಫ್ ಆಪತ್ಭ್ಬಾಂದವರನ್ನು ಬಿಡುಗಡೆ ಮಾಡಸಲಾಗಿದೆಯೆಂದು ತಿಳಿದು ಬಂದಿದೆ.
ಹೊರಟಗಾರ ಬಂಧಿಸಿದ ನಂತರ ಬಿಡುಗಡೆ ಗೊಂಡ ಆಸೀಫ್ ಆಪತ್ಭಾಂದವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದ್ದಾರೆ.
ಈ ಸಂದರ್ಭದಲ್ಲಿ ಅಬೂಬಕ್ಕರ್ ಕುಳಾಯಿ, ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ,ಯಾಸೀನ್ ಅರ್ಕುಳ, ದಾವೂದ್, ತೌಸೀಫ್ ಮತ್ತಿತರರು ಉಪಸ್ಥಿತರಿದ್ದರು.