ಕೊಚ್ಚಿ: ಕುಟ್ಟಿ ಪಟ್ಟಾಲಂ ಖ್ಯಾತಿಯ ಮಲೆಯಾಳಂ ನಟಿ ಸುಬಿ ಸುರೇಶ್ ಇದೀಗ ನಿಧನರಾಗಿದ್ದು ವಿವಿಧ ಸ್ಟೇಜ್ ಶೋ, ಹಾಸ್ಯ ನಟಿ ಮತ್ತು ನಿರೂಪಕಿಯಾಗಿ ಕೇರಳದ ಮನೆ ಮಾತಾಗಿದ್ದ ಸುಬಿಯವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾರೆ.

ಮೃತಪಟ್ಟ ಸುಬಿ ಸುರೇಶ್ ರವರಿಗೆ (೩೪) ವರ್ಷ ವಯಸ್ಸಾಗಿದ್ದು ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಇದೀಗ ಬುಧವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇವರು ಮಝವಿಲ್ ಮನೋರಮಾರವರ ‘ಮೇಡ್ ಫಾರ್ ಈಚ್’ ಮತ್ತು ಸೂರ್ಯ ಟಿವಿಯ ‘ಕುಟ್ಟಿ ಪಟ್ಟಾಲಂ’ ನಂತಹ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.
‘ಗೃಹನಾದನ್’, ‘ತಕ್ಸರಾ ಲಹಲಾ’, ‘ಎಲ್ಸಮ್ಮ ಎನ್ನಾ ಆನ್ ಕುಟ್ಟಿ’, ‘ಡ್ರಾಮಾ’, ‘ಕರಿಯಸ್ತಾನ್’ ಮುಂತಾದ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಸುಬಿ ಅವರು ಸೈ ಎನಿಸಿಕೊಂಡಿದ್ದರು.ಇದೀಗ ಅವರ ಅಗಲುವಿಕೆ ಎಲ್ಲರನ್ನು ದಿಗ್ಭ್ರಮೆ ಮೂಡಿಸಿದೆ.