';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ವಿಟ್ಲ: ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿ ಕಂಬಕ್ಕೆ ಡಿಕ್ಕಿ ಹೊಡೆದು ವಿಟ್ಲ ಸಮೀಪದ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.
ವಿಟ್ಲ ಸಮೀಪದ ಉಕ್ಕುಡ ನಿವಾಸಿ ದಿವಂಗತ ಮುಹಮ್ಮದ್ ಮುಸ್ಲಿಯಾರ್ ಎಂಬವರ ಹಿರಿಯ ಪುತ್ರ ಹಬೀಬ್ ಉಕ್ಕುಡ ದುರ್ಘಟನೆಯಲ್ಲಿ ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.
ಹಬೀಬ್ ಅವರು ಮೂರು ತಿಂಗಳ ಹಿಂದೆಯಷ್ಟೇ ವಿದೇಶಕ್ಕೆ ಕೆಲಸಕ್ಕೆ ತೆರಳಿದ್ದರು. ನಿಯಂತ್ರಣ ಕಳೆದುಕೊಂಡ ಕಾರು ಕಂಬಕ್ಕೆ ಢಿಕ್ಕಿ ಹೊಡೆದು ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಹಬೀಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಪೆರ್ನಾಳ್ ಹಬ್ಬದ ಸಂತೋಷದಲ್ಲಿದ್ದ ಕುಟುಂಬಕ್ಕೆ ಈ ಸುದ್ದಿ ತಿಳಿದು ಬರಸಿಡಿಲು ಬಡಿದಂತಾಗಿದೆ. ಯುವಕನ ಮರಣದ ಸುದ್ದಿ ತಿಳಿದ ಹುಟ್ಟೂರು ನೀರವ ಮೌನಕ್ಕೆ ಜಾರಿದೆ.
ಮೃತರು ಸಹೋದರ-ಸಹೋದರಿ, ಪತ್ನಿ, ಮಕ್ಕಳನ್ನು ಅಗಲಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.