ಬೆಳ್ತಂಗಡಿ : ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯಕ್ರಮ ಮುಕ್ತಾಯ ಹಂತಕ್ಕೆ ತಲುಪಿದ್ದು ಬಹುತೇಕ ಅಭ್ಯರ್ಥಿಗಳ ಭವಿಷ್ಯ ಇದೀಗಾಗಲೇ ಪ್ರಕಟಗೊಂಡಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹರೀಶ್ ಪೂಂಜಾ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ವಿರುದ್ಧ ಜಯ ಸಾದಿಸಿದ್ದು ಶಿವರಾಮ್ ಸೋತ ಬೆನ್ನಲ್ಲೇ ತನ್ನ ಕ್ಷೇತ್ರದ ಮತದಾರರಿಗೆ ಮಹತ್ವದ ಸಂದೇಶ ರವಾಣಿಸಿದ್ದಾರೆ.
ತನ್ನ ಸಂದೇಶದಲ್ಲಿ ನನ್ನನ್ನು ನೀವು ಹರಿಸಿದ್ದೀರಿ 82 ಸಾವಿರ ಮತಗಳು ನನ್ನ ಪಾಲಿಗೆ ಮಹತ್ವದ್ದೇ ನಮ್ಮ ಸರಕಾರವೇ ಅಧಿಕಾರದಲ್ಲಿರುತ್ತದೆ ಸೋಲು ನನ್ನ ಯಶಸ್ಸಿನ ಮೂಲವಾಗಿದೆ ನಿಮ್ಮ ರಕ್ಷಿತ್ ನಿಮ್ಮ ಜೊತೆ ಸದಾ ಇರಲಿದ್ದಾನೆ ಎಂದು ರಕ್ಷಿತ್ ಶಿವರಾಮ್ ತನಗೆ ಮತ ಹಾಕಿದ ಮತದಾರರಿಗೆ ಮಹತ್ವದ ಸಂದೇಶ ನೀಡಿದ್ದಾರೆ.
ನಿಮ್ಮ ನೋವು ನಲಿವುಗಳಿಗೆ ನಾನು ಯಾವತ್ತೂ ನಿಮ್ಮ ಜೊತೆಯಿರಲಿದ್ದೇನೆ ನನಗಾಗಿ ಪರಿಶ್ರಮ ಪಟ್ಟ ಎಲ್ಲಾ ಕಾರ್ಯಕರ್ತರಿಗೆ ಚಿರಋಣಿಯಾಗಲಿದ್ದೇನೆ ಎಂದು ರಕ್ಷಿತ್ ಶಿವರಾಮ್ ಹೇಳಿದ್ದಾರೆ.
ರಕ್ಷಿತ್ ಶಿವರಾಮ್ ರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ ಎಲ್ಲೆಡೆ ತನ್ನ ಅಭಿಮಾನಿಗಳು ಕ್ಷೇತ್ರದ ಜನತೆಗಳು ಅವರ ಸಂದೇಶದ ಪೋಸ್ಟರ್ ನ್ನು ಹಂಚಿಕೊಳ್ಳುತ್ತಿದ್ದಾರೆ.