';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ಬಹುತೇಕ ಅಭ್ಯರ್ಥಿಗಳ ಭವಿಷ್ಯ ಇದೀಗಾಗಲೇ ಪ್ರಕಟಗೊಂಡಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ಜಿದ್ದಾಜಿದ್ದಿನ ಹೋರಾಟವೇ ನಡೆದಿತ್ತು. ಆದರೆ ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ 3351 ಮತ ಅಂತರದಲ್ಲಿ ರೋಚಕ ಜಯಗಲಿಸಿದ್ದಾರೆ.
ವಿಜೇತ ಅಭ್ಯರ್ಥಿಗೆ ಈಗಾಗಲೇ ಅಭಿನಂದನೆಗಳ ಸುರಿಮಳೆ ಬರುತ್ತಿದ್ದು, ಮಂಗಳೂರಿನಿಂದ ಆಗಮಿಸಿದ ರೈ ಅವರಿಗೆ ಪುತ್ತೂರಿನ ಕಬಕದಲ್ಲಿ ಅದ್ದೂರಿ ಸ್ವಾಗತ ಮಾಡಲಾಯಿತು. ಹೂಮಾಲೆ, ಜೈಕಾರ, ಘೋಷಣೆಗಳೊಂದಿಗೆ ತೆರೆದ ಜೀಪ್ ಮೂಲಕ ಅಶೋಕ್ ರೈ ಸಾಗಿ ಬಂದರು.
3:00 ಗಂಟೆಗೆ ಕಬಕ ಬಳಿ ಬಂದು ಸೇರಿದ್ದ ಅಭಿಮಾನಿಗಳು, 06:30 ವರೆಗೂ ಪಕ್ಷದ ನಾಯಕನ ಆಗಮನಕ್ಕಾಗಿ ಕಾದು ನಿಂತರು. ಮಿತ್ತೂರಿನಿಂದ ಪುತ್ತೂರು ವರೆಗೂ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಅಶೋಕ್ ರೈ ಅವರಿಗೆ ಸಾಥ್ ನೀಡಿದರು.