ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಲಿಸಿದೆ. ಬಿಜೆಪಿ ಎರಡನೇ ಸ್ಥಾನ ಗಳಿಸಿದರೆ, ಜಾತ್ಯಾತೀತ ಜನತಾದಳದ ಕಿಂಗ್ ಮೇಕರ್ ಕನಸು ಭಗ್ನವಾಗಿದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ. ಎಸ್ ಡಿಪಿಐ ಹಾಗೂ AAP ಖಾತೆ ತೆರಯಲಿಲ್ಲ.

ಹೌದು.. ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತದತ್ತ ದಾಪುಗಾಲಿರಿಸಿದೆ. ಆಡಳಿತಾರೂಢ ಬಿಜೆಪಿ 65 ಕ್ಷೇತ್ರಗಳಲ್ಲಿ ಮಾತ್ರ ಜಯಗೊಂಡು ಕಳೆದ ಬಾರಿಗಿಂತ ಈ ಬಾರಿ ಹಿನ್ನಡೆ ಅನುಭವಿಸಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿನ ಫಲಿತಾಂಶಗಳು ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿದ್ದವು. ಅಂತೆಯೇ ಈ ಬಾರಿಯೂ ಜೆಡಿಎಸ್ ಕಿಂಗ್ ಮೇಕರ್ ಆಗಬಹುದು ಎಂದು ಸಮೀಕ್ಷೆಗಳಲ್ಲಿ ಬಣ್ಣಿಸಲಾಗಿತ್ತು.
ಆದರೆ ಈ ಬಾರಿ ಜೆಡಿಎಸ್ 19 ಕ್ಷೇತ್ರಗಳಲ್ಲಿ ಮಾತ್ರ ವಿಜಯದ ಪತಾಕೆ ಹಾರಿಸಿದೆ. ಈ ಮೂಲಕ ಜೆಡಿಎಸ್ ನ ಕಿಂಗ್ ಮೇಕರ್ ಕನಸು ಭಗ್ನಗೊಂಡಿದ್ದು, ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳುವಂತಾಗಿದೆ.
ಈ ಭಾರೀ ಎಸ್ ಡಿಪಿಐ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ನರಸಿಂಹರಾಜ ಕ್ಷೇತ್ರದಲ್ಲಿ ಮಜೀದ್ ಖಾನ್ ಕೊಂಚ ಫೈಟ್ ಬಿಟ್ಚರೆ ಉಳಿದ ಎಲ್ಲಾ ಕ್ಷೇತ್ರದಲ್ಲೂ ಅಷ್ಟಕಷ್ಚೇ ಮತ ಪಡೆದಿದೆ.
16 ಕ್ಷೇತ್ರಗಳಲ್ಲಿ ಸ್ಪರ್ದಿಸಿದ SDPI ಅಭ್ಯರ್ಥಿಗಳು ಪಡೆದ ಮತಗಳು ಈ ಕೆಳಗಿನಂತಿವೆ.
1.ಪುಲಿಕೇಶಿ ನಗರ – ಬಾಸ್ಕರ್ ಪ್ರಸಾದ್ – 4097
2.ನರಸಿಂಹರಾಜ ಮಜೀದ್ ಖಾನ್ -40963
3.ಸರ್ವಜ್ಞ ನಗರ ಅಬ್ದುಲ್ ಹನ್ನಾನ್-2995
4.ಬಂಟ್ವಾಳ ಇಲ್ಯಾಸ್ ತುಂಬೆ-3059
5.ಬೆಳ್ತಂಗಡಿ ಅಕ್ಬರ್ -2513
6.ಪುತ್ತೂರು ಶಾಫಿ ಬೆಳ್ಳಾರೆ-2788
7.ಮೂಡಬಿದ್ರೆ ಅಲ್ಫಾನ್ಸೋ ಫ್ರಾಂಕೊ -3617
8.ಚಿತ್ರದುರ್ಗ ಬಾಳೆಕಾಯಿ ಶ್ರೀನಿವಾಸ್ -2555
9.ತೇರದಾಳ ಯಮನಪ್ಪ ಗುಣದಾಳ-3527
10.ಮಡಿಕೇರಿ ಅಮೀರ್ ಮೋಹಸಿನ್-1436
11.ಮೂಡಿಗೆರೆ ಚಂದು ಅಂಗಡಿ-265
12.ರಾಯಚೂರು ಸಯ್ಯದ್ ಇಶಾಕ್-623
13.ದಾವಣಗೆರೆ ಇಸ್ಮಾಯಿಲ್ ಝಬಿಯುಲ್ಲಾ-1311
14.ಕಾಪು ಹನೀಫ್ ಮೂಳೂರು-1616
15.ಹುಬ್ಬಳ್ಳಿ ವಿಜಯ್ ಗುಂಟ್ರಲ್-1360
16.ಮಂಗಳೂರು ರಿಯಾಝ್ ಪರಂಗಿಪೇಟೆ-15054
Total Votes 90,156