ಬೆಳ್ತಂಗಡಿ: ಕೊಕ್ಕಡ ಭಾಗದಲ್ಲಿ ಯುವಕರ ತಂಡವೊಂದು ಸದ್ದಿಲ್ಲದೇ ಸಮಾಜ ಸೇವೆ ನಡೆಸುತ್ತಿದ್ದು ಈ ಒಂದು ತಂಡದ ಸಾರಥಿಯನ್ನು ಕೊಕ್ಕಡದ ಉದ್ಯಮಿ ಜನನಾಯಕ ಯುವ ಕಾಂಗ್ರೆಸ್ ಮುಖಂಡ ನಾಗೇಶ್ ಕುಮಾರ್‌ರವರು ವಹಿಸಿಕೊಂಡಿದ್ದಾರೆ.




ಇವರ ನಿಷ್ಠಾವಂತ ಸೇವೆಯನ್ನು ಕಂಡು ಇಲ್ಲಿನ ಯುವಕರು ಒಂದು ತಂಡವನ್ನು ಕಟ್ಟಿಕೊಂಡು ಜಾತಿ ಧರ್ಮ ನೋಡದೆ ಒಟ್ಟಾಗಿ ಬಡವರ ಸೇವೆಯಲ್ಲಿ ಮತ್ತು ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಅವರಿಗೆ ಬೇಕಾದಂತಹ ಸಹಾಯವನ್ನು ಮಾಡುತ್ತಾ ಅದೇ ರೀತಿ ಸರ್ಕಾರಿ ಶಾಲೆಗಳಿಗೆ ಬೇಕಾದಂತಹ ಸೌಲಭ್ಯಗಳ ಬಗ್ಗೆ ವಿಚಾರಣೆ ನಡೆಸಿ ಜಿಲ್ಲಾ ನಾಯಕರನ್ನು ಕರೆಸಿ ಬೇಕಾದ ನಿಟ್ಟಿನ ಪರಿಹಾರ ಒದಗಿಸಲು ಮನವಿ ಮಾಡುವುದು ಇಂತಹ ಹಲವು ಸಮಾಜ ಸೇವೆಯನ್ನು ನಡೆಸುತ್ತಿದ್ದಾರೆ.
ಉದ್ಯಮಿ ನಾಗೇಶ್ ಕುಮಾರ್‌ರವರ ಸಮಾಜ ಸೇವೆ ಕಂಡು ಅವರ ಮೇಲೆ ಅಭಿಮಾನ ಹೆಚ್ಚಾಗಿ ಇಲ್ಲಿನ ಯುವಕರು ಜಾತಿ ಧರ್ಮ ನೋಡದೆ ಒಟ್ಟಾಗಿ ಸೇರಿಕೊಂಡು ನಾಗೇಶ್ ಕುಮಾರ್ ಅಭಿಮಾನಿ ಬಳಗ ಕೊಕ್ಕಡ ಎಂಬ ನಾಮದೊಂದಿಗೆ ಒಂದು ತಂಡವನ್ನು ಕಟ್ಟಿಕೊಂಡು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.




ಅದೇ ರೀತಿ ನಿನ್ನೆ ನಾಗೇಶ್ ಕುಮಾರ್ ಅಭಿಮಾನಿ ಬಳಗದಿಂದ ಕೊಕ್ಕಡದಲ್ಲಿ ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಕೊಕ್ಕಡ ಹಿರಿಯ ಪ್ರಾಥಮಿಕ ಶಾಲೆ ಹಳ್ಳಿಗೇರಿ ಕಿರಿಯ ಪ್ರಾಥಮಿಕ ಶಾಲೆ ಸೌತಡ್ಕ ಇಲ್ಲಿಯ ಶಾಲಾ ವಿದ್ಯಾರ್ಥಿಗಳಿಗೆ ಅವರ ಅವಶ್ಯಕತೆಯಂತೆ ಕೊಡೆ ಹಾಗೂ ಪೆನ್ನು ಮತ್ತು ಸಿಹಿ ತಿಂಡಿ ವಿತರಣೆ ನಡೆಸಿದರು. ಇದರ ಜೊತೆಗೆ ಪರಿಸರ ಪ್ರೇಮಿ ಎನ್ನಿಸಿಕೊಂಡಿರುವ ನಾಗೇಶ್‌ರವರು ತಾನು ಭೇಟಿ ನೀಡಿದ ಎಲ್ಲಾ ಶಾಲೆಗಳಿಗೂ ಹಣ್ಣು ಹಂಪಲು ಗಿಡವನ್ನು ವಿತರಣೆ ಮಾಡವುದರ ಜೊತೆಗೆ ಒಂದು ಶಾಲೆಯಲ್ಲಿ ತಾನೇ ತನ್ನ ಕೈಯಾರೆ ಗಿಡವನ್ನು ನೇಡುವುದರ ಮೂಲಕ ಎಲ್ಲರಿಗೂ ಮಾದರಿಯಾದರು.
ಈ ಸಂದರ್ಭದಲ್ಲಿ ಬೆಸ್ಟು ಫೌಂಡೇಶನ್ ಇದರ ಅಧ್ಯಕ್ಷರು ಬೆಳ್ತಂಗಡಿ ತಾಲೂಕಿನ MLA ಕ್ಯಾಂಡಿಡೇಟ್ ಆಗಿದ್ದ ರಕ್ಷಿತ್ ಶಿವರಾಂ, ನಾಗೇಶ್ ಕುಮಾರ್ ಹಾಗೂ ನಾಗೇಶ್ ಕುಮಾರ್ ಅಭಿಮಾನಿ ಬಳಗದ ಗ್ರೂಪ್ ಮ್ಯಾನೇಜ್ಮೆಂಟ್ ಅಡ್ಮಿನ್ ಆಸಿಫ್ ಐಡಿಯಲ್ ಯುವ ಮುಖಂಡರಾದ ಎಸ್.ಕೆ ಹಕೀಮ್ ಕೊಕ್ಕಡ ಉಮೇಶ್ ಬಂಗೇರ, ಖಲಂದರ್ ಎಂ.ಎಚ್ ಗಣೇಶ್ ಕಾಶಿ ವಾಜಿದ್ ಹಲ್ಲಿಂಗೆರಿ ಹರಿಶ್ಚಂದ್ರ ಉಪ್ಪರಪಲಿಕೆ ಅಶ್ವಿನ್ ಕಿರಣ್ ಗಣೇಶ್ ಪಿಕೆಜಿ ಹಾಗೂ ನಾಗೇಶ್ ಕುಮಾರ್ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.