ಪುತ್ತೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ವತಿಯಿಂದ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಜ್ಲಿಸುನ್ನೂರು ಕಾರ್ಯಕ್ರಮ ಸೆಪ್ಟೆಂಬರ್ 01 ರಂದು ಸಂಜೆ 7:00 ಗಂಟೆಗೆ ನಡೆಯಲಿದ್ದು, ವಿಶೇಷ ಅತಿಥಿಯಾಗಿ ಕಾಲ್ನಡಿಗೆಯಲ್ಲಿ ಹಜ್ ನಿರ್ವಹಿಸಿದ ಶಿಹಾಬ್ ಚೊಟೂರು ಆಗಮಿಸಲಿದ್ದಾರೆ.
365 ವಿದ್ಯಾರ್ಥಿಗಳು, ಪಂಡಿತ ಕುಲಪತಿಗಳ ಆತಿಥ್ಯದೊಂದಿಗೆ ಪ್ರತಿ ಮಾಸವು ವಿಶ್ವಾಸಿ ಸಮೂಹದ ಮನ ಗೆದ್ದು ಮುನ್ನೇರುತ್ತಿರುವ ಮಜ್ಲಿಸುನ್ನೂರ್ ಕಾರ್ಯಕ್ರಮ ಸೆಪ್ಟೆಂಬರ್ 01 ರಂದು ಮಾಡನ್ನೂರು ಮಸೀದಿಯಲ್ಲಿ ನಡೆಯಲಿದೆ. ಸೈಯ್ಯಿದ್ ಇಬ್ರಾಹಿಂ ಬಾತಿಷಾ ತಂಗಳ್ ಅಲ್ ಬುಖಾರಿ ಆನೆಕ್ಕಲ್ ರವರು ದುಃಆ ಆಶೀರ್ವಚನಗೈಯಲಿದ್ದಾರೆ. ಅದೇ ರೀತಿ ಕೇರಳದಿಂದ ಕಾಲ್ನಡಿಗೆಯಾಗಿ ಪವಿತ್ರ ಹಜ್ ಕರ್ಮವನ್ನು ನಿರ್ವಹಿಸಿದ ಕೇರಳದ ಶಿಹಾಬ್ ಚೋಟ್ಟೂರ್ ಮೊದಲ ಬಾರಿಗೆ ಮಂಗಳೂರು ಆಗಮಿಸಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ ಉದ್ಘಾಟಿಸಲಿದ್ದು, ಸಂಸ್ಥೆಯ ಮ್ಯಾನೇಜರ್ ಕೆಯು ಖಲೀಲ್ ರಹ್ಮಾನ್ ಅರ್ಶದಿ ಸ್ವಾಗತ ಮತ್ತು ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟಮನೆ ಶುಭಹಾರೈಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್, ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಮಂಗಳ, ಅಬೂಬಕರ್ ಹಾಜಿ, ಎನ್ ಎಸ್ ಅಬ್ದುಲ್ಲಾ ಹಾಜಿ, ಹಿರಾ ಅಬ್ದುಲ್ ಖಾದರ್ ಹಾಜಿ, ಸಾಬಿತ್ ಕುಂಬ್ರ, ಅಝರ್ ಕುಂಬ್ರ ಮುಂತಾದ ಅನೇಕ ಗಣ್ಯರು, ಸಾದಾತ್,ಉಲಮಾ,ಉಮರಾ ನೇತಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಏರ್ಪಡಿಸಲಾಗಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.