ಬೆಳ್ಳಾರೆ: ಚೆನ್ನಾವರದ ಕುಂಡಡ್ಕದಲ್ಲಿ ಪೊಡಿ ಕಳ್ಳರ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಳ್ಳರನ್ನು ಹಿಡಿಯಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ಕಾಯಬೇಕಾದ ದುಸ್ಥಿತಿ ಬಂದೊದಗಿದೆ.
ಪ್ರಗತಿಪರ ಕೃಷಿಕರು ಇರುವ ಈ ಒಂದು ಏರಿಯಾದಲ್ಲಿ ರಾತ್ರಿಯಾಗುತ್ತಿದ್ದಂತೆ ಕಳ್ಳರ ಕಿತಾಪತಿ ಶುರುವಾಗುತ್ತಿದ್ದು ಅಡಿಕೆ ರಾಶಿಯಿಂದ ಅಡಿಕೆ ಕದಿಯುವುದು,ತೆಂಗಿನಕಾಯಿ ಕದಿಯುವುದು ಮಾಮೂಲು ವ್ಯವಹಾರವಾಗಿದೆ.
ಬೆಳ್ಳಗ್ಗೆ ಮಧ್ಯಾಹ್ನದ ಸಮಯದಲ್ಲಿ ಈ ಭಾಗದಲ್ಲಿ ರೌಂಡ್ಸ್ ಹಾಕುವ ಪೊಲೀಸರು ರಾತ್ರಿ ಹೊತ್ತು ಮಧ್ಯರಾತ್ರಿ ಈ ಭಾಗದಲ್ಲಿ ರೌಂಡ್ಸ್ ಹೊಡೆದರೆ ಕಳ್ಳರ ಕಿವಿಹಿಂಡುವ ಕೆಲಸ ನಡೆಯಬಹುದೆನ್ನುವುದು ಸಾರ್ವಜನಿಕರ ಅಭಿಪ್ರಾಯ..
ಅದೇ ರೀತಿ ಇಲ್ಲಿನ ಸಾರ್ವಜನಿಕರು ಸಿಸಿ ಕ್ಯಾಮರಾ ಹಾಕುವ ಬಗ್ಗೆ ಅಲೋಚನೆ ನಡೆಸಿದ್ದು ಕಳ್ಳರು ಯಾರೆಂದು ಈಗಾಗಲೇ ತಿಳಿದಿದ್ದು ಕಳ್ಳರ ಗುರುವನ್ನೆ ಹಿಡಿಯುವ ಮಾಸ್ಟರ್ ಪ್ಲಾನ್ ನಡೆತಿದ್ದು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸುವ ಮುಂಚೆ ಪೊಲೀಸರೇ ಇವರ ಹೆಡೆಮುರಿ ಕಟ್ಟಿದ್ದರೆ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗುವುದರಲ್ಲಿ ಸಂಶಯವಿಲ್ಲ..
ಕಳ್ಳರು ಕಣ್ಣು ಮುಂದೆಯೇ ಓಡಾಡುತ್ತಿದ್ದರೂ ಕಾಣ ಸಿಗಲು ಕಷ್ಟವಾಗುತ್ತಿದ್ದು ರಾತ್ರಿ ಭೂತವಾದರು ಕಾಣಸಿಗುತ್ತಿದ್ದು ಕಳ್ಳರು ಕಾಣುತ್ತಿಲ್ಲ ಎಂದು ಕಳ್ಳರನ್ನು ಹಿಡಿಯುವ ಸಂಘದ ನಾಯಕ ಹೇಳುತ್ತಿದ್ದು ಅಂತೂ ಇಂತೂ ಇಲ್ಲಿನ ಸಾರ್ವಜನಿಕರು ಕೃಷಿಕರು ಮನೆಯವರು ನಿಟ್ಟುಸಿರು ಬಿಡಬೇಕಾದರೆ ಈ ಪೊಡಿ ಕಳ್ಳರ ಹಾವಳಿ ತಪ್ಪಿಸ ಬೇಕಾಗಿದ್ದು ಇವರನ್ನು ಹೀಗೆ ಬಿಟ್ಟರೆ ಮುಂದಕ್ಕೆ ಇವರು ಜಾಮಾ ಕಳ್ಳರಾಗುವುದರಲ್ಲಿ ಡೌಟೇ ಇಲ್ಲ..