ಬೆಂಗಳೂರು: ಕೋವಿಡ್ ಪ್ರಕರಣ ರಾಜ್ಯದಲ್ಲೂ ಪಾಸಿಟಿವ್ ಕಂಡಿದ್ದು ಮದ್ದೂರಿನ ವ್ಯಕ್ತಿಯೊರ್ವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ತಿಳಿದು ಬಂದಿದೆ.

ಇನ್ನು ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ರಣ ಕೇಕೆ ಮಿತಿ ಮೀರುತ್ತಿದ್ದು ಇತ್ತ ಕರ್ನಾಟಕದಲ್ಲೂ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಸಂಭ್ರಮಾಚರಣೆಗೆ ಮುನ್ನೆಚ್ಚರಿಕೆಯಾಗಿ ರಾಜ್ಯ ಸರಕಾರ ಹೊಸ ಮಾರ್ಗ ಸೂಚಿ ಪ್ರಕಟಿಸಿದೆ.
ಕೇರಳ ಗಡಿ ಬಾಗಗಳಲ್ಲಿ ಕೋವಿಡ್ ತಪಾಸಣೆ ಹೆಚ್ಚಿಸುವುದು.
60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು, ಗರ್ಭಿಣಿಯರು, ಎದೆ ಹಾಲುನಿಸುವ ತಾಯಂದಿರು, ಹಾಗು ಶೀತ ಜ್ವರ ಕೆಮ್ಮು ಮತ್ತು ವಿಶೇಷವಾಗಿ ಕಿಡ್ನಿ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವವರು ಹೊರಗಡೆ ಹೋಗುವಾಗ ಅರೋಗ್ಯ ಹಿತ ದೃಷ್ಟಿಯಿಂದ ಮಾಸ್ಕ್ ಧರಿಸಿಕೊಳ್ಳುವುದು.
ಅನಗತ್ಯವಾಗಿ ಶೀತ ಜ್ವರ ಕೆಮ್ಮು ಇರುವವರು ಹೆಚ್ಚು ಜನ ಸಂದಣಿ ಇರುವ ಕಡೆ ಹೋಗದೇ ಇರುವುದು.
ಜ್ವರ ಇನ್ನಿತರ ಸಮಸ್ಯೆಗಳಿರುವವರು ಅರೋಗ್ಯ ಸಲಹೆಗಳನ್ನು ಪಡೆಸುಕೊಳ್ಳುವುದು.
ಮೂಗು ಮತ್ತು ಬಾಯಿ ಮುಚ್ಚುವ ರೀತಿಯಲ್ಲಿ ಮಾಸ್ಕ್ ಗಳನ್ನು ಧರಿಸಿಕೊಳ್ಳುವುದು.
ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿ ಸುರಕ್ಷತೆ ಪಾಲಿಸಿಕೊಳ್ಳುವುದು ಮತ್ತು ಸರಕಾರದ ಮಾರ್ಗ ಸೂಚಿಗಳನ್ನು ಪಾಲಿಸಿಕೊಳ್ಳುವುದು ಸೂಕ್ತವಾಗಿದೆ.