ಪುತ್ತೂರು: ಅನಾರೋಗ್ಯ ಹಿನ್ನಲೆ ನವ ವಿವಾಹಿತೆಯೋರ್ವೆ ಮೃತಪಟ್ಟ ಘಟನೆ ಇದೀಗ ನಡೆದಿದೆ.
ಮೃತಪಟ್ಟ ಯುವತಿಯನ್ನು ಫಾತಿಮತ್ ರಫಾ (21) ಎಂದು ಗುರುತಿಸಲಾಗಿದೆ.

ಕಳೆದ ಎರಡು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಳುತ್ತಿದ್ದ ರಫಾ ರವರು ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ವೆಂಟಿಲೇಟರ್ ಮೂಲಕ ಮನೆಗೆ ಕರೆತಂದಿದ್ದು ಇದೀಗ ಮನೆಯಲ್ಲಿ ಅಸು ನೀಗಿದ್ದಾರೆ ಎಂದು ತಿಳಿದು ಬಂದಿದೆ.
ಮರ್ಕಜ್ ಮಹಿಳಾ ಕಾಲೇಜ್ ಕುಂಬ್ರ ಇದರ ವಿದ್ಯಾರ್ಥಿನಿಯಾಗಿದ್ದ ರಫಾ ಕಳೆದ ಎಂಟು ತಿಂಗಳ ಹಿಂದೆ ರೌಫ್ ಎಂಬ ಯುವಕನನ್ನು ಮದುವೆಯಾಗಿದ್ದು ಇದೀಗ ದಂಪತಿಗಳ ಕನಸು ನನಸಾಗುವ ಮುನ್ನವೇ ಯುವತಿ ಇಹಲೋಕ ತ್ಯಜಿಸಿದ್ದಾಳೆ.

ಮನೆಯ ಬಳಿ ನೂರಾರು ಸಾರ್ವಜನಿಕರು ಅಂತಿಮ ದರ್ಶನಕ್ಕೆ ಸಾಲು ಸಾಲಾಗಿ ಬರುತ್ತಿದ್ದು ಯುವತಿಯ ಪತಿಯ ಮನೆಯಲ್ಲಿ ಸಂದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿದು ಬಂದಿದೆ.ಮನೆಯವರು ಹಾಗೂ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟುತ್ತಿದೆ.
ಇನ್ನು ಪ್ರತಿಭಾವಂತಿ ವಿದ್ಯಾರ್ಥಿನಿಯ ಅಕಾಲಿಕ ಮರಣಕ್ಕೆ ಮರ್ಕಜ್ ಹುದಾ ವುಮೆನ್ಸ್ ಕಾಲೇಜು ಕುಂಬ್ರ ವತಿಯಿಂದ ತೀವ್ರ ಸಂತಾಪ ಸೂಚಿಸಿದೆ.ಅದೇ ರೀತಿ ತಮ್ಮ ಗೆಳತಿಯ ಮರಣದ ವಾರ್ತೆ ಅರಿತ ಮರ್ಕಝಿನಲ್ಲಿ ಕಲಿತಂತಹ ಎಲ್ಲಾ ವಿದ್ಯಾರ್ಥಿಗಳು ಅವಳಿಗಾಗಿ ತಮ್ಮ ತಮ್ಮ ಬ್ಯಾಚ್ ಗ್ರೂಪಿನಲ್ಲಿ ಈಗಾಗಲೇ ಪ್ರಾರ್ಥನೆಯಲ್ಲಿ ತೊಡಗಿದ್ದು ಎಲ್ಲಾ ಯುವತಿಯರ ಸ್ಟೇಟಸಿನಲ್ಲೂ ರಫಾಳಿಗಾಗಿ ಕಣ್ಣಿರುಡುತ್ತಿರುವ ದೃಶ್ಯವೇ ಕಾಣುತ್ತಿರುವುದು ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿದೆ.