ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ.ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸುದೀಪ್ ಭೇಟಿಯಾಗಿದ್ದಾರೆ.
ಕೆಲವು ಸಮಯ ಸೌಹಾರ್ದಯುತ ಮಾತುಕತೆಯನ್ನು ಸುದೀಪ್ ನಡೆಸಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ಅವರು ನಟಿಸಿರುವ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣಾ ಬಿಡುಗಗಡೆಗೆ ಸಿದ್ಧವಾಗಿದೆ. ದಿನಕ್ಕೊಂದು ಕ್ಯೂರಾಸಿಟಿ ಹುಟ್ಟಿಸುವ ರೀತಿ ಸಿನಿಮಾದ ಪಾತ್ರ ಪರಿಚಯ, ಪೋಸ್ಟರ್ ಬಿಡುಗಡೆ ಮಾಡುತ್ತಾ ಅಭಿಮಾನಿಗಳಲ್ಲಿ ಇನ್ನಷ್ಟು ನೀರಿಕ್ಷೆಯನ್ನು ಹೆಚ್ಚು ಮಾಡಿದೆ.
ವಿಕ್ರಾಂತ್ ರೋಣ ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಮ್ಯೂಸಿಕ್ ಸಂಸ್ಥೆ ಭಾರೀ ಮೊತ್ತಕ್ಕೆ ಖರೀದಿಸಿದೆ.ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬೆಳಗ್ಗೆ 11 ಗಂಟೆಗೆ ಡೆಡ್ ಮ್ಯಾನ್ ಆಂಥೆಮ್ ಸಾಂಗ್ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಘೋಷಿಸಿದೆ.