ಎಮ್ಮೆಯೊಂದು ಎರಡು ತಲೆ ಮತ್ತು ನಾಲ್ಕು ಕಣ್ಣು ಇರುವ ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅಪರೂಪದಲ್ಲಿ ಅಪರೂಪದ ಈ ಎಮ್ಮೆ ಮರಿಯನ್ನು ನೋಡಿದ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.
ಧೋಲ್ಪುರ್ ಜಿಲ್ಲೆಯ ಸಿಕ್ರೌಡ ಗ್ರಾಮದಲ್ಲಿ ಹಲವು ವರ್ಷಗಳಿಂದ ಸಾಕುತ್ತಿದ್ದ ಎಮ್ಮೆಯ ಕರು ಇದಾಗಿದ್ದು, ಎರಡು ತಲೆ, ಎರಡು ಬಾಯಿ ಜತೆಗೆ ನಾಲ್ಕು ಕಣ್ಣುಗಳನ್ನು ಹೊಂದಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.ಅಪರೂಪದ ಎಮ್ಮೆಯ ಕರುವನ್ನು ನೋಡಲು ನೆರೆಯ ಹಳ್ಳಿಗಳಿಂದ ಜನರು ಆಗಮಿಸುತ್ತಿದ್ದಾರೆ.
ಏತನ್ಮಧ್ಯೆ ಈ ವಿಚಿತ್ರ ಕರುವಿಗೆ ಹಾಲುಣಿಸುತ್ತಾ, ನೀರು ಕೊಡುತ್ತಾ ಮನೆಯವರೆಲ್ಲ ಆರೈಕೆ ಮಾಡುತ್ತಿದ್ದಾರೆ. ಕರು ಆರೋಗ್ಯವಾಗಿದೆ ಮತ್ತು ಎರಡೂ ಬಾಯಿಯಿಂದಲು ಹಾಲು ಕುಡಿಯುತ್ತದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ಕರುವಿನ ಜನನದ ವೇಳೆ ಎಮ್ಮೆ ಮತ್ತು ಕರುವಿಗೆ ಯಾವುದೇ ಅಪಾಯವಾಗಿಲ್ಲ. ಸುಲಲಿತವಾಗಿ ಎಮ್ಮೆ ಕರುವಿಗೆ ಜನ್ಮ ನೀಡಿದೆ. ಕರುವನ್ನು ಸಾಮಾನ್ಯ ರೀತಿಯಲ್ಲಿಯೇ ನೋಡಿಕೊಳ್ಳಲಾಗುತ್ತಿದ್ದು, ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ಪಶು ವೈದ್ಯರಾದ ಗುಡ್ಡೆ ಸಿಂಗ್ ತಿಳಿಸಿದ್ದಾರೆ.