dtvkannada

ಪುತ್ತೂರು : ಪುತ್ತೂರಿನ ಎಲ್ಲಾ ಮೊಬೈಲ್ ಅಂಗಡಿಗಳ ಮಾಲಕರ ‘ಮೊಬೈಲ್ ರಿಟೈಲರ್ ಅಸೋಸಿಯೇಶನ್‌ನ ಸಂಘದ ಪದಾಧಿಕಾರಿಗಳು ಪುತ್ತೂರಿನ ಮಾನ್ಯ ಶಾಸಕರಾದ ಸಂಜೀವ ಮಠಂದೂರ್ ಅವರನ್ನು ಇಂದು ಭೇಟಿಯಾಗಿ ವೀಕೆಂಡ್ ಕರ್ಪ್ಯೂ ಅನ್ನು ರದ್ದು ಮಾಡುವ ಬಗ್ಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರು ಸೋಮವಾರ ದಿನ ಮಾನ್ಯ ಮುಖ್ಯಮಂತ್ರಿಗಳು , ಉಸ್ತುವಾರಿ ಸಚಿವರುಗಳಲ್ಲಿ ಮಾತಾಡಿ ಮುಂದಿನ ವಾರದ ಅಂತ್ಯದ ಮೊದಲು ನಮ್ಮಲ್ಲಿ ವೀಕೆಂಡ್ ಕರ್ಪ್ಯೂವನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅದೇ ರೀತಿ ಪುತ್ತೂರು ಎ.ಸಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಕೂಡ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ AIMRA ದಕ್ಷಿಣ ಕನ್ನಡ ಉಪ್ಪಾದಕ್ಷ ಶಶಿರಾಜ್ ರೈ , ಪುತ್ತೂರು ಮೊಬೈಲ್ ರಿಟೈಲರ್ ಅಧ್ಯಕ್ಷ ಪ್ರವೀಣ್ ಅಮೈ , ಗೌರವಾಧ್ಯಕ್ಷರಾದ ಸಿರಾಜ್ ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!