ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂಧ್ಯದ ಎರಡನೇ ದಿನ, ಜಾರ್ವೋ ಭಾರತದ ಜರ್ಸಿ ಧರಿಸಿ ಮತ್ತೆ ಮೈದಾನ ಪ್ರವೇಶಿಸಿದರು.
ಜಾರ್ವೋ ಈ ರೀತಿ ಮೈದಾನಕ್ಕಿಳಿಯುವುದು ಇದು ಮೂರನೇ ಬಾರಿ. ಮೊದಲ ಎರಡು ಭಾರಿ ಮೈದಾನ ಪ್ರವೇಶಿಸಿದಕ್ಕೆ ಲಾರ್ಡ್ಸ್ ಮೈದಾನ ಅವರಿಗೆ ನಿಷೇಧವನ್ನು ವಿಧಿಸಿತ್ತು
ಲಾರ್ಡ್ಸ್ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಔಟಾದಾಗ, ಜಾರ್ವೋ ಪ್ಯಾಡ್ ಮತ್ತು ಹೆಲ್ಮೆಟ್ ಧರಿಸಿ ಮೈದಾನ ಪ್ರವೇಶಿಸಿದರು. ಈ ಸಮಯದಲ್ಲಿ, ಒಬ್ಬ ಅಭಿಮಾನಿಯ ಅವರಿಗೆ ಬ್ಯಾಟ್ ನೀಡಿದರು. ಇದನ್ನು ಕಂಡ ಭದ್ರತಾ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ಇದರ ನಂತರ, ಭಾರತ ತಂಡ ಫೀಲ್ಡಿಂಗ್ ಮಾಡುತ್ತಿದ್ದಾಗ, ಅವರು ಮತ್ತೊಮ್ಮೆ ಮೈದಾನವನ್ನು ಪ್ರವೇಶಿಸಿದ್ದರು.
ಓವಲ್ ಟೆಸ್ಟ್‌ನಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಇಂಗ್ಲೆಂಡ್ ತಂಡ ಎರಡನೇ ದಿನ ಬ್ಯಾಟಿಂಗ್ ಮಾಡುತ್ತಿತ್ತು. ಉಮೇಶ್ ಯಾದವ್ ಇನ್ನಿಂಗ್ಸ್ನ 34 ನೇ ಓವರ್ ಮಾಡುತ್ತಿದ್ದಾಗ, ಜಾರ್ವೋ ಚೆಂಡು ಹಿಡಿದು ಮೈದಾನದಲ್ಲಿ ಓಡುತ್ತಿರುವುದು ಕಂಡುಬಂತು. ಜಾರ್ವೂ ವೇಗವಾಗಿ ಓಡಿ ಬಂದು ಚೆಂಡನ್ನು ಬೌಲ್ ಮಾಡಿದರು. ಈ ಸಮಯದಲ್ಲಿ, ಅವರು ನಾನ್-ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದ ಜಾನಿ ಬೈರ್‌ಸ್ಟೊಗೆ ಡಿಕ್ಕಿ ಹೊಡೆದರು. ಈ ಕಾರಣದಿಂದಾಗಿ, ಉಮೇಶ್ ಅವರ ಓವರ್ ಮುಗಿಸುವುದು ಸಹ ವಿಳಂಬವಾಯಿತು.
Jarvo again!!! Wants to bowl this time 😂😂#jarvo69 #jarvo #ENGvIND #IndvsEng pic.twitter.com/wXcc5hOG9f
— Raghav Padia (@raghav_padia) September 3, 2021
ಲೀಡ್ಸ್ ಟೆಸ್ಟ್ ಪಂದ್ಯದ ವೇಳೆ ಜಾರ್ವೂ ಮೈದಾನ ಪ್ರವೇಶಿಸಿದ ನಂತರ ಇರ್ಫಾನ್ ಪಠಾಣ್, ‘ಒಂದೇ ವ್ಯಕ್ತಿ ಮೈದಾನದಲ್ಲಿ ಎರಡು ಬಾರಿ ಭದ್ರತಾ ನಿಯಮಗಳನ್ನು ಮುರಿದು ಭಾರತೀಯ ಆಟಗಾರರನ್ನು ತಲುಪಿದರೆ ಈ ಚಿತ್ರವು ಭಯಹುಟ್ಟಿಸುತ್ತದೆ’ ಎಂದು ಬರೆದಿದ್ದರು.
ತದನಂತರ ಯೋಕ್ಷೈರ್ ಕ್ರಿಕೆಟ್ ಅವನನ್ನು ನಿಷೇಧಿಸಿತು. ಇಂಗ್ಲೆಂಡ್ ಕ್ರಿಕೆಟ್ ಕೂಡ ಆತನಿಗೆ ಆಜೀವ ನಿಷೇಧ ಹೇರಿದ್ದು, ಪದೇಪದೇ ಮೈದಾನಕ್ಕೆ ಎಂಟ್ರಿ ಕೊಟ್ಟು ನಿಯಮಮೀರಿದ ಅಭಿಮಾನಿ ಈಗ ಜೈಲುಪಾರಾಗಿದ್ದಾನೆ.