dtvkannada

ಬೆಳ್ತಂಗಡಿ: ಕಳೆದ ಎರಡು ದಿನಗಳ ಹಿಂದೆ ಬೆಳ್ತಂಗಡಿ ಠಾಣೆಗೆ ನುಗ್ಗಿ ಪೊಲೀಸರಿಗೆ ಅವಾಜ್ ಹಾಕಿ ಗುಂಡಾಗಿರಿ ನಡೆಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇದೀಗ ಶಾಸಕರ ಮನೆಗೆ ಬೆಳ್ತಂಗಡಿ ತಾಲೂಕು ಪೊಲೀಸರು ಡೌಡಾಯಿಸಿದ್ದು ಶಾಸಕರನ್ನು ಬಂಧಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

ಠಾಣೆಯಲ್ಲಿ ದಿನಗಳ ಹಿಂದೆ ಧರಣಿ ಕೂತಿದ್ದ ಶಾಸಕ

ಒಂದು ಕಡೆಯಲ್ಲಿ ಶಾಸಕರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಮನೆ ಅಂಗಳದಲ್ಲಿ ಸೇರಿಕೊಂಡಿದ್ದು ಇನ್ನೊಂದು ಕಡೆ ಬೆಳ್ತಂಗಡಿ ಪೊಲೀಸರು ಜಮಾಯಿಸಿದ್ದು ಮುಂದಿನ ಪರಿಸ್ಥಿತಿ ಏನಾಗಬಹುದೆಂದು ಕಾದು ನೋಡಬೇಕಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!