ಮಂಗಳೂರು: ಕಾಲ್ನಡಿಗೆ ಮೂಲಕ ಉಪ್ಪಿನಂಗಡಿಯಿಂದ ಮುಸಲ್ಮಾನರ ಪವಿತ್ರ ಕೇಂದ್ರವಾದ ಮೆಕ್ಕಾಗೆ ತಲುಪಿ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಿ ಮರಳಿ ತಾಯ್ನಾಡಿಗೆ ಮರಳಿದ ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ನೌಷದ್ ರವರನ್ನು ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಮತ್ತು ಉಬಾರ್ ಫ್ರೆಂಡ್ಸ್ ಮಂಗಳೂರು ಅದ್ದೂರಿಯ ಸ್ವಾಗತ ನೀಡಿ ಬರಮಾಡಿಕೊಂಡರು.
ಮುಸಲ್ಮಾನರ ಪಾವಿತ್ರ್ಯತೆ ಮತ್ತು ಪ್ರತಿಯೊಬ್ಬನ ಆಸೆ ಮತ್ತು ಆಕಾoಕ್ಷೆ ಗಳಾಗಿವೆ ಪವಿತ್ರ ಹಜ್ಜ್ ನಿರ್ವಹಿಸುವುದು ಅದರಲ್ಲಿ ನಮ್ಮೂರಿನ ನೌಷದ್ ರವರ ಸಾಹಾಸ ಮಹತ್ವಪೂರ್ಣವಾದದ್ದು ತನ್ನ ಕಾಲ್ನಡಿಗೆ ಮೂಲಕ ಛಲದೊಂದಿಗೆ ಸರಿ ಸುಮಾರು 8000 ಕಿ.ಮೀ ಕ್ರಮಿಸಿ ಹಜ್ಜ್ ನಿರ್ವಹಿಸಿದ್ದು ಮಹತ್ವಪೂರ್ಣ ಕಾರ್ಯವಾಗಿದೆ.
ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಮತ್ತು ಉಬಾರ್ ಫ್ರೆಂಡ್ಸ್ ಮಂಗಳೂರು ನೌಶದ್ ರವರ ಈ ಛಲವನ್ನು ಅಭಿನಂದಿಸುತ್ತದೆ ಎಂದು ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸ್ಥಾಪಕಾಧ್ಯಕ್ಷ ಶರೀಫ್ ಅಬ್ಬಾಸ್ ವಲಾಲ್ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೋಸ್ಟಲ್ ಫ್ರೆಂಡ್ಸ್ ಮತ್ತು ಉಬಾರ್ ಫ್ರೆಂಡ್ಸ್ ಮಂಗಳೂರು ಬಳಗದವರಿದ್ದು ಕೋಸ್ಟಲ್ ಫ್ರೆಂಡ್ಸ್ ಇದರ ಅಧ್ಯಕ್ಷ ಇಮ್ತಿಯಾಝ್, ಉಪಾಧ್ಯಕ್ಷ ಮುನ್ನ ಕಮ್ಮರಡಿ, ಕೋಶಾಧಿಕಾರಿ ಸಿರಾಜ್ ಯೆರ್ಮಾಲ್, ಅಝರ್ ಷಾ ಕುಂಬ್ರ , ನೌಷದ್ mk,ಅಫ್ತಾಬ್ ಬಸ್ತಿಕಾರ್, ತೌಸಿಫ್ ಯು,ಟಿ ಶಫಿಕ್ ಅರಫ, ದಾವೂದ್ ಮತ್ತು ಹಲವು ಸದಸ್ಯರು ಉಪಸ್ಥಿತರಿದ್ದರು.