ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 17 ಮಂದಿ ಆರೋಪಿಗಳನ್ನು ಈ ಹಿಂದೆ ವಿಚಾರಣೆಗಾಗಿ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು ಅದರ ವಿಚಾರಣಾ ಅವಧಿ ಇಂದು ಜೂ 20 ರಂದು ಅಂತ್ಯವಾದ ಹಿನ್ನೆಲೆಯಲ್ಲಿ ದರ್ಶನ್ ಸಹಿತ ಎಲ್ಲಾ ಆರೋಪಿಗಳನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.


ನ್ಯಾಯಾಲಯದ ಮುಂದೆ ಹಾಜರದ ನಟ ದರ್ಶನ್ ಸಹಿತ ಎಲ್ಲಾ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು ಪೊಲೀಸರ ಮನವಿಯಂತೆ ನಟ ದರ್ಶನ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯವು ಮೂರನೇ ಬಾರಿಗೆ 2 ದಿನಗಳವರೆಗೆ ಪೊಲೀಸ್ ಕಷ್ಟಗಳಿಗೆ ಒಪ್ಪಿಸಿದರೆ ಉಳಿದಂತಹ ಆರೋಪಿಗಳಾದ ಪವಿತ್ರ ಗೌಡ ಹಾಗೂ ಇತರ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆಜ್ಞೆ ಹೊರಡಿಸಿದೆ ಎಂದು ತಿಳಿದುಬಂದಿದೆ.


ಈಗಾಗಲೇ ದರ್ಶನ್ರ ಧರ್ಮಪತ್ತ್ರಿ ಹಲವು ಮೀಡಿಯಾ ಚಾನಲ್ಗಳ ಮೇಲೆ ಕೇಸು ದಾಖಲಿಸಿದ್ದು ಸೈನ್ಸ್ ಕೂಡ ನೀಡಲಾಗಿದೆ ಎಂದು ತಿಳಿದುಬಂದಿದೆ. ಇಷ್ಟೊಂದು ನಿರ್ಭೀತಿಯಿಂದ ದರ್ಶನ್ ರವರ ಪತ್ನಿ ಇದರ ಹಿಂದೆ ಕೆಲಸ ಮಾಡುತ್ತಿರುವುದು ದರ್ಶನ್ ಈ ಒಂದು ಕೃತ್ಯ ನಡೆಸಿಲ್ಲ ಏಕುತ್ತಿದ್ದಲ್ಲಿ ಭಾಗಿಯಾಗಿಲ್ಲ ಎನ್ನುವಂತಹ ಸ್ಪಷ್ಟ ಮಾಹಿತಿ ಇರುವ ಕಾರಣ ಅವರಿಗೆ ಜಾಮೀನು ಕೊಡಿಸಲು ಇದರ ಹಿಂದೆ ಓಡಾಡುತ್ತಿದ್ದಾರೆ.
ಒಂದಷ್ಟು ಮೂಲಗಳ ಪ್ರಕಾರ ದರ್ಶನ್ ಈ ಕೊಲೆ ನಡೆಯುವಂತಹ ಸಂದರ್ಭದಲ್ಲಿ ಅವರಿರಲಿಲ್ಲ ಅವರಿಗೆ ಕೊಲೆಯ ಬಗ್ಗೆ ಒಂದಿಂಚು ಮಾಹಿತಿ ಕೂಡ ಇರಲಿಲ್ಲ ಎಂದು ಹೇಳುತ್ತಿದ್ದರೆ ಇನ್ನೊಂದು ಕಡೆ ದರ್ಶನ್ ರವರು ರೇಣುಕಾ ಸ್ವಾಮಿಯನ್ನು ಹೆದರಿಸಿ ವಾರ್ನಿಂಗ್ ಮಾಡಿ ಕಳುಹಿಸಿ ಕೊಟ್ಟಿದ್ದರು ಯಾವುದೇ ಕೊಲೆ ನಡೆಸಿಲ್ಲ ಎನ್ನುತ್ತಿದ್ದಾರೆ.
ಇನ್ನೊಂದು ಕಡೆ ಇಲ್ಲ ದರ್ಶನ್ ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸಿ ತೆರಳಿದ್ದು ತದನಂತರ ದರ್ಶನ್ ರವರ ಗ್ಯಾಂಗ್ ಇವರನ್ನು ಕೊಂದ ಹಾಕಿದ್ದು ಈ ವಿಚಾರವನ್ನು ದರ್ಶನ್ ರವರ ಜೊತೆ ಮಾತುಕತೆ ನಡೆಸಿ ಡೆಡ್ ಬಾಡಿಯನ್ನು ಬೇರೆ ಕಡೆ ಸಾಗಿಸಲು ಮತ್ತು ಕೇಸನ್ನು ಮುಚ್ಚಿಹಾಕಲು ತನ್ನ ಸ್ವಂತ ಹಣವನ್ನು ಖರ್ಚು ಮಾಡಿದ್ದಾರೆ ಎನ್ನುವಂತಹ ಆರೋಪವನ್ನು ಕೂಡ ಹೇಳುತ್ತಿದ್ದಾರೆ. ಎಲ್ಲದಕ್ಕೂ ಉತ್ತರ ಸಿಗಬೇಕಾದರೆ ದರ್ಶನ್ ರವರ ಕಸ್ಟಡಿ ಮುಗಿದ ನಂತರವೇ ಗೊತ್ತಾಗಲಿದ್ದು ಸಧ್ಯದಲ್ಲೇ ದರ್ಶನ್ ರವರಿಗೆ ಜಾಮೀನು ಕೂಡ ಸಿಗುವ ಎಲ್ಲಾ ನೀರಿಕ್ಷೆ ಇದೆ ಎಂದು ತಿಳಿದು ಬಂದಿದೆ.