ಪಿ ಎಂ ಫ್ಯಾಮಿಲಿ ಪೂಡಲ್ ವತಿಯಿಂದ “ಉಮರ್ ಸಖಾಫಿ ಉಸ್ತಾದ್” ಅನುಸ್ಮರಣಾ ಮಜ್ಲಿಸ್…
ನರಿಂಗಾನ / ವರ್ಕಾಡಿ :ಪಿ ಎಂ ಫ್ಯಾಮಿಲಿ ಪೂಡಲ್ (ಮರ್ಹೂಂ ಪೂಡಲ್ ಮುಹಮ್ಮದ್ – ಖದೀಜಾ ದಂಪತಿಗಳ ಪರಂಪರೆ) ವತಿಯಿಂದ, ಇತ್ತೀಚಿಗೆ ಅಗಲಿದ ಪ್ರಮುಖ ಪಂಡಿತರೂ, ಸಂಘ ಕುಟುಂಬಗಳ ನೇತಾರರೂ ಆಗಿದ್ದ ಉಮರ್ ಸಖಾಫಿ ಉಸ್ತಾದ್ ಕಲ್ಮಿಂಜ ರವರ ಅನುಸ್ಮರಣಾ ಕಾರ್ಯಕ್ರಮವು ಕಳೆದ ಜೂನ್ 20 ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮಗ್ರಿಬ್ ನಮಾಝಿನ ಬಳಿಕ ಉಸ್ತಾದರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಂಚಿತವಾಗಿ ಉಸ್ತಾದರ ಖಬರ್ ಝಿಯಾರತ್ ನಡೆಸಲಾಯಿತು. ಪಿ ಎ ಮುಹಮ್ಮದ್ ಸಖಾಫಿ ಪೂಡಲ್ ನೇತೃತ್ವ ವಹಿಸಿದ್ದರು. ನಂತರ ಉಸ್ತಾದರ ಮನೆಯಲ್ಲಿ ನಡೆದ ಅನುಸ್ಮರಣಾ ಕಾರ್ಯಕ್ರಮದಲ್ಲಿ ಮೌಲಿದ್, ದ್ಸಿಕ್ರ್, ಯಾಸೀನ್ ಓದಿ ಹದಿಯ ಮಾಡಲಾಯಿತು.


ಕುಟುಂಬ ಸದಸ್ಯರಾರ ಎ ಪಿ ಅಬೂಬಕ್ಕರ್ ಸಖಾಫಿ ಪೂಡಲ್, ಪಿ ಎಂ ಮುಹಮ್ಮದ್ ಮದನಿ ಪೂಡಲ್, ಪಿ ಎ ಮುಹಮ್ಮದ್ ಸಖಾಫಿ ಪೂಡಲ್, ಶಫೀಖ್ ಬಾಹಸನಿ ತೋಕೆ, ಮುಹಮ್ಮದ್ ಸ್ವಾಲಿಹ್ ಮೋಂಟುಗೋಳಿ, ಅಬ್ದುಲ್ ಜಲೀಲ್ ಮೋಟುಗೋಳಿ ಹಾಗೂ ಉಸ್ತಾದರ ಅಳಿಯ ಶಾಕಿರ್ ಮುಸ್ಲಿಯಾರ್ ಉಪ್ಪಳ ರವರು ಉಸ್ತಾದ್ ರವರ ಜೀವನದ ಬಗ್ಗೆ ಸ್ಮರಿಸಿದರು.
ನಂತರ ನಡೆದ ದುಆ ಮಜ್ಲಿಸ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಕುಟುಂಬದ ಹಲವು ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ನೀಡಲಾಯಿತು. ಕುಟುಂಬದ ವತಿಯಿಂದ ನಡೆಸಲು ಉದ್ದೇಶಿಸಿದ “ಒಂದು ಲಕ್ಷ ಇಖ್ಲಾಸ್ ಸಮರ್ಪಣೆ“ ಕಾರ್ಯಕ್ರಮವು ಉಸ್ತಾದರ 40ನೇ ದಿನದ ದುಆ ಮಜ್ಲಿಸ್ ನಲ್ಲಿ ನಡೆಯಲಿದೆ.