ಪುತ್ತೂರು: 2020-21 ನೇ ಸಾಲಿನ ರಾಷ್ಟ್ರ ಮಟ್ಟದ ಗೋಲ್ಡನ್ ಆರೋ ಪರೀಕ್ಷೆಯಲ್ಲಿ ಸುದಾನ ವಸತಿಯುತ ಶಾಲೆ ಪುತ್ತೂರಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ವಿದ್ಯಾರ್ಥಿಗಳಾದ ಯುತಿಕಾ, ನಿಹಾಫ ಫಾತಿಮಾ, ಸಾನ್ವಿತ ಎಂ ರೈ, ಗ್ರೀಷ್ಮಾ, ಧೃತಿ ವಿ ಶೆಟ್ಟಿ, ಮಾನ್ವಿ ವಿಶ್ವನಾಥ್ ಇವರು ಬುಲ್ ಬುಲ್ ವಿಭಾಗದಲ್ಲಿ ಹಾಗೂ ಆಯುಷ್ ಎಲ್ ರೈ, ಪ್ರದ್ಯುಮ್ನ ಡಿ ಆಚಾರ್ಯ, ವಿನ್ಯಾಸ್ ಡಿ.ವಿ, ಸಹನ್ ಎಸ್, ಅಮೃತ್ ಬಿ, ದಂಸಿಕ್ ಇವರು ಕಬ್ ವಿಭಾಗದಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರಿಗೆ ಶಾಲಾ ಕಬ್- ಬುಲ್ ಬುಲ್ ಶಿಕ್ಷಕರಾದ ಶ್ರೀಮತಿ ರೇಖಾ, ಶ್ರೀಮತಿ ಜೀವಿತಾ ರೈ, ಶ್ರೀಮತಿ ಗೀತಾ ಆಚಾರ್ಯ ಹಾಗೂ ಶ್ರೀಮತಿ ಹೇಮಲತಾ ರೈ ಇವರು ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ನಾಗರಾಜ್ ರವರು ತಿಳಿಸಿದ್ದಾರೆ. ಸಹಕಾರಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಪೋಷಕರಿಗೂ ಶಾಲಾ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ.