ಮಂಗಳೂರು: ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ರಾಜ್ ಕಮಲ್ ಮಾಲೀಕರ ಮಗನಾದ ಯುವ ನಾಯಕ ಆರ್.ಕೆ ಅಬ್ದುಲ್ ಅಝೀಝ್(೪೨) ಇಂದು ಸಂಜೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಅಝೀಝ್ ರವರು ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಕಾಂಗ್ರೆಸ್ ನಾಯಕರಾಗಿ ಹಲವು ಘಟಾನುಘಟಿ ನಾಯಕರು ಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
ಕೊರೋನ ಸಂದರ್ಭದಲ್ಲಿ ಒಂದಷ್ಟು ಜನರು ಹೊರಬರಲು ಹೆದರುತ್ತಿರುವ ಸಮಯದಲ್ಲಿ ತನ್ನ ಜೀವವನ್ನು ಲೆಕ್ಕಿಸದೆ ಹಲವು ಬಡಜನರಿಗೆ ಕಿಟ್ ಗಳನ್ನು ಮನೆ ಮನೆಗೆ ತಲುಪಿಸುವುದಲ್ಲದೇ ಬಡ ಜನರ ಕಣ್ಣೀರೊರೆಸಿದ ನಾಡಿನ ಹೆಮ್ಮೆಯ ನಾಯಕರೆನೆಸಿಕೊಂಡಿದ್ದರು.
ಯಾರೆ ಕಷ್ಟ ನಷ್ಟಗಳನ್ನು ಹೇಳಿ ತನ್ನ ಬಳಿ ಬಂದರೆ ಏನಾದರೂ ಕೊಟ್ಟು ಸಹಕರಿಸುವ ಮನೋಭಾವ ಹೊಂದಿದ್ದ ಯುವ ನಾಯಕನು ಯುವ ಉಧ್ಯಮಿಯೂ ಆಗಿದ್ದರು ರಾಜ್ ಕಮಲ್ ಅಝೀಝ್ ರವರು.
ತನ್ನ ನಾಡು ಮಂಗಳೂರಿನ ದೇರಳಕಟ್ಟೆಯ ಆದರೂ ಜಿಲ್ಲೆಯಾದ್ಯಂತ ಎಲ್ಲಾ ಕಡೆ ತನ್ನ ಗೆಳೆಯರ ಬಳಗವನ್ನು ಹೊಂದಿಕೊಂಡಿದ್ದ ಅಝೀಝ್ ರವರು ಪುತ್ತೂರು ಕಡೆ ಹೆಚ್ಚಾಗಿ ನಂಟನ್ನು ಹೊಂದಿದ್ದರೆ ಕುಂಬ್ರದ NFC ಯುವಕರ ಬಳಗದಲ್ಲೂ ಉತ್ತಮ ಒಡನಾಟ ಇಟ್ಟುಕೊಂಡಿದ್ದರು.
ಇವರ ಆಕಸ್ಮಿಕ ಮರಣ ವಾರ್ತೆಯನ್ನು ಕೇಳಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಕಾರ್ಯನಿಮಿತ್ತ ಉತ್ತರಕನ್ನಡ ಜಿಲ್ಲೆಗೆ ತೆರಳುತ್ತಿದ್ದ ಸಂದರ್ಭ ಕುಮುಟಾ ಬಳಿ ರೈಲಿನಲ್ಲಿ ಹೃದಯಾಘಾತದ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸೂಚನೆ:- ಕುತ್ತಾರ್ RKC ಅಬ್ದುಲ್ ಅಝೀಝ್ ರವರ ಜನಾಝವು ಕುತ್ತಾರ್ ಮದನಿ ನಗರದ ಮನೆಗೆ ಇದೀಗ ತಪುಪಿದ್ದು ಪರಿಪಾಲಣೆಯು ಬೆಳಗ್ಗೆ 8:00 ಗಂಟೆಗೆ ಸರಿಯಾಗಿ ನಡೆಯಲಿದ್ದು 10:00 ಗಂಟೆಗೆ ಮಯ್ಯಿತ್ ನಮಾಝ್ ನಂತರ ಮಯ್ಯಿತ್ ದಫನ ಕಾರ್ಯವು ಮದನಿ ನಗರದ ಜುಮಾ ಮಸೀದಿ ಕುತ್ತಾರ್ ವಠಾದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.