ಉಪ್ಪಿನಂಗಡಿ: ತೆಕ್ಕಾರು ಶ್ರೀ ಕ್ಷೇತ್ರ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಮುಸಲ್ಮಾನರ ವಿರುದ್ಧ ಕೋಮು ಪ್ರಚೋದನಕಾರಿಯಾಗಿ ಬಾಷಣ ಮಾಡಿದ ಘಟನೆ ನಿನ್ನೆ ಸಂಭವಿಸಿದೆ.

ತೆಕ್ಕಾರು ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಶಾಸಕರು ಪ್ರಚೋದನಕಾರಿ ಭಾಷಣ ನಡೆಸಿದ್ದು ತೆಕ್ಕಾರು ಮುಸಲ್ಮಾನ ಕಂತ್ರಿಗಳೇ ಹೆಚ್ಚಿರುವ ನಾಡು ಹಿಂದೂಗಳು ಜೊತೆಯಾದರೆ ಆ ಬ್ಯಾರಿಗಳನ್ನು ಎದುರಿಸಬಹುದು ಎಂದು ಮುಸಲ್ಮಾನರ ವಿರುದ್ಧ ಶಾಸಕ ನಾಲಿಗೆ ಹರಿಯಬಿಟ್ಟಿದ್ದಾರೆ.
ಸುಹಾಸ್ ಶೆಟ್ಟಿಯ ಹತ್ಯೆಯ ಮರುದಿನವೇ ಮತ್ತೆ ಶಾಸಕ ಹರೀಶ್ ಪೂಂಜಾರವರು ಕೋಮು ಪ್ರಚೋದನಾ ಭಾಷಣ ನಡೆಸಿದ್ದು ಜಿಲ್ಲೆಯ ಆಂಟಿ ಕಮ್ಯುನಲ್ ವಿಂಗ್ ಯಾವರೀತಿ ಕ್ರಮ ಕೈಗೊಳ್ಳುತ್ತದೆ ಎಂಬುವುದು ಕಾದು ನೋಡಬೇಕಿದೆ.
ಕೋಮು ಸಾಮರಸ್ಯದಿಂದ ಸೌಹಾರ್ದತೆಯಿಂದ ಬಾಳುತ್ತಿರುವ ತೆಕ್ಕಾರಿನಲ್ಲಿ ಶಾಸಕರ ಇಂತಹ ಹೇಳಿಕೆಗಳಿಂದ ತಲೆ ತಗ್ಗಿಸುವಂತಾಗಿದೆ ಎನ್ನುತ್ತಾರೆ ತೆಕ್ಕಾರಿನ ಜನತೆ.
ಇನ್ನು ಸೌಹಾರ್ದ ನಿಟ್ಟಿನಲ್ಲಿ ಬ್ರಹ್ಮಕಲಶಕ್ಕೆ ದೇವಸ್ಥಾನದ ಆಡಳಿತ ಸಮಿತಿ ಮಸೀದಿಗಳಿಗೆ ಅಹ್ವಾನ ನೀಡಿದ್ದು ಇದರ ವಿರುದ್ಧವೂ ಕೂಡ ಶಾಸಕರು ಕಿಡಿ ಕಾರಿದ್ದಾರೆ.
ಹಿಂದೂಗಳಾದ ನಾವುಗಳು ಮುಸಲ್ಮಾನರ ಜೊತೆಗೆ ಸೌಹಾರ್ದತೆಗೆ ಹೋಗುವ ಅವಶ್ಯಕತೆನೇ ಇಲ್ಲ, ಮಸೀದಿಗಳಿಗೆ ತೆರಳಿ ಅಹ್ವಾನ ನೀಡಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಒಟ್ಟಾರೆಯಾಗಿ ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕುತ್ತಿರುವ ತೆಕ್ಕಾರಿನ ಜನತೆಯ ಮದ್ಯೆ ಹುಲಿ ಹಿಂಡಲು ಬಂದಿರುವ ಶಾಸಕರ ಮನಸ್ಥಿತಿಯ ವಿರುದ್ಧ ಜಾತ್ಯತೀತ ನಾಗರಿಕರು ಚೀಮಾರಿ ಹಾಕಿದ್ದಾರೆ.