ಬೆಂಗಳೂರು: ಇತ್ತೀಚೆಗೆ ರಹೀಮನ ಕೊಲೆ ನಡೆದು ಇಡೀ ರಾಜ್ಯ ಹಾಗೂ ದ.ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಂತಹ ವಾತವರಣ ಸೃಷ್ಟಿಗೊಂಡಾಗ ಇದರ ಬಗ್ಗೆ ಮನಗೊಂಡ ರಿಲ್ಯಾಕ್ಸ್ ಇನ್ ಗ್ರೂಪ್ ಆಫ್ ಕಂಪನಿ ಇದರ ಮಾಲಕರೂ SYF ಪುತ್ತೂರು ಇದರ ಸದಸ್ಯರೂ ಆದ ಹನೀಫ್ ಪೆರ್ಲಾಪ್ ರವರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿಯನ್ನು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸಂಘರ್ಷಕ್ಕೆ ಕಾರಣರಾದವರನ್ನು ಬಂಧಿಸಬೇಕೆಂದು ಮನವಿ ಮಾಡಿದ್ದು ಜೊತೆಗೆ ಮನವಿಯಲ್ಲಿ ಅಮಾಯಕ ಅಬ್ದುಲ್ ರಹಿಮಾನ್ ಕೊಲೆಯ ಹಿಂದೆ ಇರುವ ಎಲ್ಲಾ ಸಂಘಪರಿವಾರ ನಾಯಕರನ್ನು ಬಂಧಿಸಬೇಕು ಮತ್ತು ಜಿಲ್ಲೆಯಲ್ಲಿ ನಿರಂತರ ಕೊಲೆಗೆ ಪ್ರಮುಖ ಕಾರಣರಾಗುವ ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಬಂಧಿಸಿ ಜೈಲುಗಟ್ಟಬೇಕು ಹಾಗೂ ಎಲ್ಲಾ ಅಪರಾಧಿಗಳಿಗೆ ಕನಿಷ್ಠ 6 ವರ್ಷ ಜೈಲು ಶಿಕ್ಷೆ ಆಗುವಂತೆ ಮಾಡಬೇಕು ಎಂಬ ಮನವಿಯನ್ನು ಮಾಡಿದರು.

ಅದರ ಜೊತೆಗೆ ರಹೀಮನಿಗೆ ನ್ಯಾಯ ನೀಡುವುದರ ಜೊತೆಗೆ ಕುಟುಂಬಕ್ಕೆ ಪರಿಹಾರ ನಿಧಿಯನ್ನು ಘೋಷಿಸಲು ಮನವಿ ಮಾಡಿದರು.ಅದೇ ರೀತಿ ಹಲವಾರು ಬಡ ಕುಟುಂಬಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಹಲವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇದೇ ಹನೀಫ್‌ರವರು ತನ್ನ ವ್ಯಯಕ್ತಿಕ ನೆಲೆಯಲ್ಲಿ ರಹೀಮರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಘೋಷಣೆ ಮಾಡಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದು.