';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ರಾಯಚೂರು: ಜಿಲ್ಲೆಯ ಲಿಂಗಸುಗೂರು ನಗರದ ವಿವೇಕಾನಂದ ಬಡಾವಣೆಯ ಜನ ಅಪರಿಚಿತ ವ್ಯಕ್ತಿಯ ವಿಲಕ್ಷಣ ವರ್ತನೆಗೆ ಬೆಚ್ಚಿಬಿದ್ದಿದ್ದಾರೆ.ಅಪರಿಚಿತ ವ್ಯಕ್ತಿ ಮಧ್ಯರಾತ್ರಿ ಮಚ್ಚು ಹಿಡಿದು ಮನೆಗಳ ಬಾಗಿಲು ಬಡಿಯುತ್ತಿದ್ದಾನೆ.
ಈ ವಿಲಕ್ಷಣ ನಡವಳಿಕೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಲಿಂಗಸುಗೂರು ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಕಳೆದೆರಡು ದಿನಗಳಿಂದ ವಿವಿಧ ಏರಿಯಾಗಳಲ್ಲಿ ರಾತ್ರಿ ಮಚ್ಚು ಹಿಡಿದು ವ್ಯಕ್ತಿ ತಿರುಗಾಟ ನಡೆಸಿದ್ದಾನೆ. ಸಿಸಿ ಟಿವಿ ವೀಡಿಯೋ ನೋಡಿ ಭಯಭೀತರಾದ ಜನ, ರಾತ್ರಿ ನಿದ್ದೆಗೆಡಿಸಿಕೊಂಡಿದ್ದಾರೆ.
ಬಡಾವಣೆಯಲ್ಲಿ ಈಗಾಗಲೇ ಒಂದು ಮನೆ ಕಳ್ಳತನವಾಗಿದೆ. ಮನೆ ಬಾಗಿಲು ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹೀಗಾಗಿ ಜನರಿಗೆ ಭಯ ಶುರುವಾಗಿದೆ.
ಮಚ್ಚು ಹಿಡಿದು ರಾತ್ರಿ ಗಸ್ತು ತಿರುಗುವ ವ್ಯಕ್ತಿಯ ವೀಡಿಯೋ ವೈರಲ್ ಆಗಿದೆ. ಹೀಗಾಗಿ ಭಯಭೀತರಾಗಿರುವ ಜನ ಅಪರಿಚಿತ ವ್ಯಕ್ತಿಯ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.