ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮರಿನಾಯಕನಹಳ್ಳಿ ಬಳಿ ಭೀಕರ ಅಪಘಾತ ನಡೆದಿದ್ದು, ಅಪಘಾತದಲ್ಲಿ ದಂಪತಿಗಳಿಬ್ಬರು ಬಲಿ ಆಗಿದ್ದಾರೆ. ದಂಪತಿಯ 1 ವರ್ಷದ ಹೆಣ್ಣು ಮಗು ಅದೃಷ್ಟವಷಾತ್ ಪಾರಾಗಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಸುರವನಹಳ್ಳಿ ನಿವಾಸಿ ದಂಪತಿ ಮೃತಪಟ್ಟಿದ್ದಾರೆ.
ರಾಜಪ್ಪ(35) ಹಾಗೂ ಮೌನಿಕಾ(28) ಮೃತ ದುರ್ದೈವಿಗಳು. ಬೆಂಗಳೂರಿನಲ್ಲಿ ಜೆ.ಸಿ.ಬಿ ಆಪರೇಟರ್ ಆಗಿದ್ದ ರಾಜಪ್ಪ, ಕೆಲಸದ ನಿಮಿತ್ತ ಕುಟುಂಬದೊಂದಿಗೆ ತೆರಲುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಸಣ್ಣ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.