ಮಂಗಳೂರು: ಮಂಗಳೂರಿನಲ್ಲಿ ಮಹಿಳೆ ಮೇಲೆ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ದರೋಡೆಗೆ ಯತ್ನಿಸಿದ ಘಟನೆ ನಡೆದಿತ್ತು.
ರಿಟ್ಝ್ ಕಾರಿನಲ್ಲಿ ಬಂದ ನಾಲ್ವರು ಮಹಿಳೆಯ ಬ್ಯಾಗ್ ಕಸಿಯಲು ಯತ್ನಿಸಿರುವುದು, ಮಹಿಳೆ ಪ್ರತಿರೋಧ ಒಡ್ಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೂಡಲೇ ಸಾರ್ವಜನಿಕರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದು, ಆ ತಂಡ ಕಾರಿನಲ್ಲಿ ಪರಾರಿಯಾಗಿರುವ ದೃಶ್ಯ ಎಲ್ಲೆಡೆ ಹರಡಿತ್ತು.
ಈ ಘಟನೆ ಸಂಭಂದಿಸಿ ಪ್ರತಿಕ್ರಿಯೆ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಇದು ಪೊಲೀಸ್ ಕಾರ್ಯಕ್ಷಮತೆಯ ಅಣುಕು ಕಾರ್ಯಚರಣೆ ಎಂದಿದ್ದಾರೆ. ಸಾರ್ವಜನಿಕರು ಯಾವ ರೀತಿ ಪ್ರತಿಕ್ರಯಿಸುತ್ತಾರೆ ಎಂದು ನೋಡಲು ಈ ವೀಡಿಯೋ ಮಾಡಲಾಗಿದೆ ಎಂದಿದ್ದಾರೆ.
ಜಾಗೃತಿಗಾಗಿ ಅಣಕು ಕಾರ್ಯಾಚರಣೆ :
ದರೋಡೆ, ಸುಲಿಗೆಯಂತಹ ಸಂದರ್ಭದಲ್ಲಿ ಸಾರ್ವಜನಿಕರು, ಸಂತ್ರಸ್ತೆ, ಪೊಲೀಸರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಪುನರಾವಲೋಕನಕ್ಕಾಗಿ ಈ ಅಣಕು ಕಾರ್ಯಾಚರಣೆ ನಡೆಸಲಾಗಿದೆ. ಈ ರೀತಿಯ ನೈಜ ಘಟನೆಗಳು ನಡೆದರೆ ಸಾರ್ವಜನಿಕರು ತಕ್ಷಣ ಸ್ಪಂದಿಸಬೇಕು ಎಂಬ ಸಂದೇಶವನ್ನು ಈ ಅಣಕು ಕಾರ್ಯಾಚರಣೆ ಮೂಲಕ ನೀಡುವ ಪ್ರಯತ್ನ ನಡೆಸಿದ್ದೇವೆ. ಈ ಕಾರ್ಯಾಚರಣೆ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿರಲಿಲ್ಲ. ಮಹಿಳೆಯರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆಯಾಗಿದ್ದು ಮಹಿಳೆಯರು, ಹಿರಿಯ ನಾಗರಿಕರು ಸಾರ್ವಜನಿಕವಾಗಿ ಓಡಾಡುವಾಗ ಜಾಗರೂಕರಾಗಿರಬೇಕು.
-ಎನ್.ಶಶಿಕುಮಾರ್,
ಪೊಲೀಸ್ ಆಯುಕ್ತರು, ಮಂಗಳೂರು