ಮಂಚಿ: SDPI ಮಂಚಿ ಗ್ರಾಮ ಸಮಿತಿ ಅಧೀನದಲ್ಲಿರುವ ನೋಳ ಬೂತ್ ಸಮಿತಿ ವತಿಯಿಂದ ಮಂಚಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಕ್ಕಾಜೆ ಪೇಟೆಯಿಂದ ನೋಳ ಕಡೆಗೆ ಸಾಗುವ ರಸ್ತೆಯ ದುರಸ್ತಿ ಸ್ವಚ್ಛೀಕರಣ ಹಾಗೂ ಶ್ರಮದಾನ ಕಾರ್ಯಕ್ರಮ SDPI ನೋಳ ಬೂತ್ ಕಾರ್ಯದರ್ಶಿ ಸ್ವಾಲಿಹ್ ಕುಕ್ಕಾಜೆ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಲವಾರು SDPI ಕಾರ್ಯಕರ್ತರು ಹಾಗೂ ಸ್ಥಳೀಯ ಯುವಕರು ಶ್ರಮದಾನ ಕಾರ್ಯಕ್ಕೆ ಕೈ ಜೋಡಿಸಿ ಸಹಕರಿಸಿದರು