ಪಾಟ್ರಕೋಡಿ: SYS ಪಾಟ್ರಕೋಡಿ ಬ್ರಾಂಚ್ ಇದರ ವಾರ್ಷಿಕ ಮಹಾಸಭೆಯು ಬ್ರಾಂಚ್ ಅಧ್ಯಕ್ಷರಾದ ಸುಲೈಮಾನ್ ಸಹದಿ ಅಧ್ಯಕ್ಷತೆಯಲ್ಲಿ ಸೈಯದ್ ಅಲ್ ಹಾದಿ ಇಬ್ರಾಹಿಮ್ ಹಂಝಾ ತಂಙಳ್ ಪಾಟ್ರಕೋಡಿ ಇವರ ದುವಾ ನೇತೃತ್ವದೊಂದಿಗೆ ತಾಜುಲ್ ಉಲಮಾ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಖಾದರ್ ಫೈಝಿಯ ಉದ್ಘಾಟನೆ ನೆರವೇರಿಸಿ, ಕಾರ್ಯದರ್ಶಿ ರಫೀಕ್ ಮದನಿ ವರದಿ ಮಂಡಿಸಿದರು. ಕೋಶಾಧಿಕಾರಿ ಕೆ.ಬಿ ಮುಹಮ್ಮದ್ ಅವರ ಅನುಮತಿ ಪ್ರಕಾರ ರಫೀಕ್ ಮದನಿ ಲೆಕ್ಕ ಪತ್ರ ಮಂಡಿಸಿ ಸಭೆ ಅನುಮೋದನೆಯನ್ನು ಪಡೆದರು.
ಈ ಸಂದರ್ಭದಲ್ಲಿ ಲತೀಫ್ ಸಹದಿ ಶೇರ್ ಹಾಗೂ SYS ಮಾಣಿ ಸೆಂಟರ್ ಕಾರ್ಯದರ್ಶಿ ಯೂಸುಫ್ ಸೈಯಿದ್ ಸೆಂಟರ್ ನಿಂದ ಸಭೆಯ ವೀಕ್ಷಕರಾಗಿ ಸಲಹೆ ನೀಡಿದರು, ಹಳೆ ಸಮಿತಿಯನ್ನು ಬರ್ಕಸ್ತುಮಾಡಿ ನೂತನ ಸಮಿತಿಯನ್ನು ರಚಿಸಲಾಯಿತು,
ನೂತನ ಸಮಿತಿಯ ಸಲಹೆಗಾರರಾಗಿ ಸೈಯದ್ ಅಲ್ ಹಾದಿ ಇಬ್ರಾಹಿಮ್ ಹಂಝಾ ತಂಙಳ್ ಪಾಟ್ರಕೋಡಿ ವಹಿಸಿದರು. ಅಧ್ಯಕ್ಷರಾಗಿ ಖಾದರ್ ಫೈಝಿ, ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಬಿ.ಎಂ.ಕೆ, ಕೋಶಾಧಿಕಾರಿಯಾಗಿ ಖಾಸಿಮ್ ಪಾಟ್ರಕೋಡಿ, ಉಪಾಧ್ಯಕ್ಷರಾಗಿ ಅದಂ ಬನ್ನೂರು, ದವಾ ಕಾರ್ಯದರ್ಶಿಯಾಗಿ ರಫೀಖ್ ಮದನಿ, ಟೀಂ ಇಸಬಾ ಕಾರ್ಯದರ್ಶಿಯಾಗಿ ನಝೀರ್ ಎಂ ಆಯ್ಕೆಯಾದರು.
ಸುಲೈಮಾನ್ ಸಹದಿ, ಕೆ.ಬಿ ಮುಹಮ್ಮದ್, ಯೂಸುಫ್ ಕೆ.ಎಸ್,ಅಬ್ದುಲ್ ಜಬ್ಬಾರ್, ಬಶೀರ್ ಎಂ, ಇಬ್ರಾಹಿಮ್ ಸುನ್ನಿ, ಟಿ.ಕಾದರ್, ಜುಬೈರ್.ಟಿ, ಲತೀಫ್ ಬಿ.ಎಂ.ಕೆ, ಅಬ್ದುಲ್ ರಝಾಕ್ ಬಯಬೆ, ಅಬ್ಬುಬಕ್ಕರ್ ಎಂ, ಉಮ್ಮರ್ ಎನ್, ಮಜೀದ್ ಬಿ.ಎಚ್, ಫಾರೂಖ್ ಎಂ, ರಫೀಖ್ ಬಿ.ಎಂ.ಕೆ ಇವರನ್ನು ಕಾರ್ಯಕಾರಿ ಸಮಿತಿ ಗೆ ಆಯ್ಕೆ ಮಾಡಲಾಯಿತು..
ಈ ಸಂದರ್ಭದಲ್ಲಿ ತಾಜುಲ್ ಉಲಮಾ ಸುನ್ನಿ ಸೆಂಟರ್ ಸಮಿತಿಯ ಅಧ್ಯಕ್ಷರಾದ ಕೆ.ಬಿ ಮುಹಮ್ಮದ್ ಹಾಗೂ ಕಾರ್ಯದರ್ಶಿ ತಶ್ರೀಫ್.ಟಿ ಹಾಗೂ ಕೋಶಾಧಿಕಾರಿ ಬಶೀರ್ ಎಂ, SSF ಪಾಟ್ರಕೋಡಿ ಶಾಖೆಯ ಅಧ್ಯಕ್ಷರಾದ ಸಾಜಿದ್ ಎಂ, ಶಾಖೆಯ ನಾಯಕರಾದ ಸಾಬಿತ್, ಕೆ.ಪಿ ಖಲಂದರ್ ಸಭೆಯಲ್ಲಿ ಉಪಸ್ಥಿತರಿದ್ದರು..
ಬ್ರಾಂಚ್ ಕಾರ್ಯದರ್ಶಿ ರಫೀಕ್ ಮದನಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಬಿ.ಎಂ.ಕೆ ಅಝೀಝ್ ವಂದಿಸಿದರು.