ವಿಟ್ಲ, ಸೆ.14: ದಕ್ಷಿಣ ಕನ್ನಡ ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ವತಿಯಿಂದ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ಆನ್‌ಲೈನ್ ಕವಿಗೋಷ್ಠಿ ನಡೆಯಿತು. ಬೀಜದಕಟ್ಟೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆನ್’ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಡಿ.ಐ.ಅಬೂಬಕರ್ ಕೈರಂಗಳ, ಎಂ.ಎ.ಆಸಿಫ್ ಝುಹ್‌ರಿ ಉಳ್ಳಾಲ, ಮುಹಮ್ಮದ್ ಹಾಜಿ ಪರಪ್ಪು, ಮುಸ್ತಫಾ ಅಂಜಿಕ್ಕಾರ್ ದೋಹ ಕತ್ತರ್, ಎಂ.ಎ.ಅಬ್ದುರ್ರಹ್ಮಾನ್ ಝುಹ್‌ರಿ ಕುಂಬ್ರ, ದಾವೂದ್ ಉಜಿರೆ, ಎ.ಬಿ.ಮೊಹಿದೀನ್ ಕಳಂಜ, ಟಿ.ಕೆ.ಶರೀಫ್ ಕೈರಂಗಳ, ಜಲಾಲುದ್ದೀನ್ ಮದನಿ ಉಳ್ಳಾಲ, ಎನ್.ಎಸ್.ಶರೀಫ್ ಕೈರಂಗಳ, ಪ್ರಶಾಂತ್ ಚೌಕದಪಾಲು, ಎಸ್.ಎಂ.ಇಬ್ರಾಹಿಂ ಝುಹ್‌ರಿ ಕುಂಬ್ರ, ಯು.ಆರ್.ಶೆಟ್ಟಿ ಮಂಗಳೂರು, ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಮೊದಲಾದವರು ಸಾಹಿತ್ಯ ವಿಚಾರ ಕುರಿತು ಮಾತನಾಡಿದರು.
ಅನ್ಸಾರ್ ಕಾಟಿಪಳ್ಳ, ಎಂ.ಎ.ಮುಸ್ತಫಾ ಬೆಳ್ಳಾರೆ, ದಿಲೀಪ್ ವೇದಿಕ್ ಕಡಬ, ಡಿ.ಎ.ಅಬ್ಬಾಸ್ ಪಡಿಕ್ಕಲ್, ಬಶೀರ್ ಕಲ್ಕಟ್ಟ, ಸಲೀಂ ಮಾಣಿ, ಹಮೀದ್ ಹಸನ್ ಮಾಡೂರು ಮೊದಲಾದವರು ಸ್ವರಚಿತ ಕವನ ವಾಚಿಸಿದರು.
ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಲೇಖಕ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ರವರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಇಖ್ಬಾಲ್ ಬಾಳಿಲ ಕೃತಜ್ಞತೆ ಸಲ್ಲಿಸಿದರು. ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮ ನಿರೂಪಣೆ ಮಾಡಿದರು.