dtvkannada

ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ಬೆಳಗಾವಿ, ಭಾರತ ಇವರು ಸಾಹಿತ್ಯ, ಭಾಷೆ, ನೆಲ -ಜಲ, ಸಂಸ್ಕೃತಿ, ಸಂಘಟನೆ, ವೈದ್ಯಕೀಯ ಹೀಗೆ ಇನ್ನಿತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ, ಸಾಧನೆ, ಹಾಗೂ ಜ್ಞಾನವನ್ನು ಗುರುತಿಸಿ ಕೊಡಮಾಡುವ ಅಂತಾರಾಷ್ಟ್ರೀಯ ಮಟ್ಟದ ‘ವಿದ್ಯಾ ವಿಭೂಷಣ ‘ ಪ್ರಶಸ್ತಿಗೆ ಸಂಘಟನಾ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಶ್ರೀ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್ ರವರು ಭಾಜನರಾಗಿರುತ್ತಾರೆ ಎಂದು ಕಸ್ತೂರಿ ಸಿರಿಗನ್ನಡ ವೇದಿಕೆ(ರಿ) ಬೆಳಗಾವಿಯ ಜಿಲ್ಲಾಧ್ಯಕ್ಷರಾದ ಪ್ರೊ.ಎಲ್.ಎಚ್ ಪೆಂಡಾರಿ(ಕವಿತ್ತ ಕರ್ಮಮಣಿ) ತಿಳಿಸಿದ್ದಾರೆ.

ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್ ರವರು ಗುರುಕುಲ ಕಲಾ ಪ್ರತಿಷ್ಠಾನ (ರಿ ) ಇದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಕುಲ ಕಲಾ ಪ್ರತಿಷ್ಠಾನ(ರಿ)ವು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಂತಹ ಗಡಿ ರಾಜ್ಯಗಳಲ್ಲಿ ಹಾಗೂ ಅಮೇರಿಕಾ, ದುಬೈ, ಜರ್ಮನಿ, ಆಸ್ಟ್ರೇಲಿಯಾ ಹೀಗೆ ವಿದೇಶಗಳಲ್ಲೂ ಕನ್ನಡದ ಕಂಪನ್ನು ಪಸರಿಸಿದ ಕೀರ್ತಿ ಈ ಸಂಸ್ಥೆಗಿದೆ. ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಮತ್ತು ಉದಯೋನ್ಮುಖರಿಗೆ ವೇದಿಕೆ ತರಭೇತಿಯನ್ನು ನೀಡಿ ವೇದಿಕೆ ಕಲ್ಪಿಸುವ ಕಾರ್ಯ ಮಾಡುತ್ತಿದೆ.

By dtv

Leave a Reply

Your email address will not be published. Required fields are marked *

error: Content is protected !!