ಜೈಪುರ್: 19 ವರ್ಷದ ಯುವಕನೊಬ್ಬ 60 ವರ್ಷದ ಮಹಿಳೆಯನ್ನು ಹತ್ಯೆಗೈದಿದ್ದು ಅಲ್ಲದೆ ಆಕೆಯ ಮೃತ ದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಭಯಾನಕ ಘಟನೆ ನಡೆ ರಾಜಸ್ಥಾನದ ಹನುಮಾನ್‍ಗಢ್‍ನಲ್ಲಿ ನಡೆದಿದೆ.
ಆರೋಪಿಯನ್ನು ಸುರೇಂದ್ರ (ಮಾಂಡಿಯಾ) ಎಂದು ಗುರುತಿಸಲಾಗಿದ್ದು, ಮಹಿಳೆ ವಿಧವೆಯಾಗಿದ್ದು, ದುಲ್ಮಾನಾ ಗ್ರಾಮದ ನಿವಾಸಿಯಾಗಿದ್ದರು. ಆರೋಪಿಯನ್ನು ಪಿಲಿಬಂಗಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಹತ್ಯೆ ಪ್ರಕರಣ ಮಾತ್ರವಲ್ಲದೆ, ನೆಕ್ರೋಫಿಲಿಯಾ ಕಾಯ್ದೆ (ಮೃತದೇಹದೊಂದಿಗೆ ಸೆಕ್ಸ್ ಮಾಡುವ ಅಪರಾಧ)ಯಡಿ ಕೇಸ್ ದಾಖಲಾಗಿದೆ.
ಸುರೇಂದ್ರ ರಾತ್ರಿ ಮಹಿಳೆಯ ಮನೆಗೆ ಹೋಗಿದ್ದ. ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನ ಪಟ್ಟ. ಆದರೆ ಮಹಿಳೆ ಅದನ್ನು ಪ್ರತಿರೋಧಿಸಿದಾಗ ಹತ್ಯೆ ಮಾಡಿದ್ದಾನೆ. ನಂತರ ತನ್ನ ಬಯಕೆ ಪೂರೈಸಿಕೊಂಡಿದ್ದಾನೆ. ನಂತರ ಮಹಿಳೆಯ ಸಂಬಂಧಿ ಬಳಿ ಹೋಗಿ ತಾನು ಮಾಡಿದ ಕೃತ್ಯ ಹೇಳಿದ್ದಾನೆ. ನಾವು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗಲೂ ಸತ್ಯವನ್ನಷ್ಟೂ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.