ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರು ಗ್ರಾಮದಲ್ಲಿ ನಿನ್ನೆ ಸಂಜೆಯಿಂದಲೇ ನಾಪತ್ತೆಯಾಗಿದ್ದ ಶರತ್ ಹಸಿರೆ ಎಂಬ ಎರಡೂವರೆ ವರ್ಷದ ಮಗು ಬೋರ್ವೆಲ್ ಬಿದ್ದಿದ್ದು ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯ ವೇಳೆ ತಂದೆಯೇ ಕೊಲೆ ಮಾಡಿದ್ದು ಎಂದು ಗೊತ್ತಾಗಿದೆ.
ತೋಟದ ಮನೆಯಲ್ಲೇ ಬಾಲಕನ ಕುಟುಂಬ ವಾಸವಿತ್ತು. ಮನೆಯಿಂದ 200 ಮೀಟರ್ ದೂರದಲ್ಲಿದ್ದ ಬೋರ್ವೆಲ್ ಬಿದ್ದು ಮಗು ಮೃತಪಟ್ಟಿದೆ ಎಂದು ಪೊಲೀಸರು ಶಂಕಿಸಿದ್ದರು. ಬೋರ್ವೆಲ್ಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ಮೃತಪಟ್ಟಿರುವುದಾಗಿ ಬೆಳಗಾವಿ ಎಸ್ಪಿ ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಅಧಿಕೃತ ಮಾಹಿತಿ ನೀಡಿದ್ದರು. ನಂತರ ಮಗುವಿನ ತಂದೆಯನ್ನು ವಿಚಾರಣೆ ಮಾಡಲಾಗಿದೆ.
ನಿನ್ನೆ ಸಂಜೆಯಿಂದ ಕಾಣೆಯಾಗಿದ್ದ ಮಗುವಿನ ಕುರಿತು ತನಿಖೆಗೆ ಆಗಮಿಸಿದ್ದ ಪೊಲೀಸರನ್ನು ಮಗುವಿನ ತಂದೆ ಸಿದ್ದಪ್ಪ ಬೋರ್ವೆಲ್ ಬಳಿ ಕರೆದೊಯ್ದಿದ್ದ. ಜಮೀನಿನಲ್ಲಿ ಬೋರ್ವೆಲ್ ಇದೆ ಬನ್ನಿ ನೋಡೋಣ ಎಂದಿದ್ದ. ಬೋರ್ವೆಲ್ನಲ್ಲಿ ಮಗು ಬಿದ್ದಿರಬಹುದೆಂದು ಕರೆದೊಯ್ದಿದ್ದ. ಬೋರ್ವೆಲ್ನಲ್ಲಿ ನೋಡಿದಾಗ ಮಗು ಇರುವುದು ಗೊತ್ತಾಗಿದೆ. ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆನಂತರ ಬೋರ್ವೆಲ್ನಿಂದ ಮಗುವನ್ನು ಹೊರತೆಗೆದು ಮಗುವಿನ ತಂದೆ ಸಿದ್ದಪ್ಪನನ್ನು ಹಾರೂಗೇರಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ನಿನ್ನೆ ಸಂಜೆ ಬಾಲಕ ನಾಪತ್ತೆಯಾದ ಬಗ್ಗೆ ತಂದೆ ದೂರು ನೀಡಿದ್ದರು ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದರು. ಆದರೆ ವಿಚಾರಣೆ ವೇಳೆ ತಂದೆಯೇ ಕೊಲೆ ಮಾಡಿ ಬೋರ್’ವೇಳ್ ಗೆ ಹಾಕಿದ ವಿಷಯ ಬೆಳಕಿಗೆ ಬಂದಿದೆ. ಅಗ್ನಿಶಾಮಕ ಸಿಬ್ಬಂದಿಗಳು ಮಗುವನ್ನು ಹೊರತೆಗೆದಿದ್ದು, ಈರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿದ್ದಪ್ಪ ಮಗು ನನ್ನದಲ್ಲ ಅಂತಾ ಹೆಂಡತಿ ಜೊತೆ ಪದೇ ಪದೇ ಕಿರಿಕ್ ಮಾಡುತ್ತಿದ್ದನಂತೆ. ಈ ಕುರಿತು ಹಲವು ಬಾರಿ ಗ್ರಾಮದ ಮುಖಂಡರು, ಕುಟುಂಬಸ್ಥರು ರಾಜಿ ಪಂಚಾಯಿತಿ ಕೂಡ ನಡೆಸಿದ್ದರು. ಆದರೂ ಸುಧಾರಿಸಿಕೊಳ್ಳದ ಸಿದ್ದಪ್ಪ ಮಗನನ್ನ ಕಂಡರೆ ಸಿಟ್ಟಾಗುತ್ತಿದ್ದ. ಈ ಕಾರಣಕ್ಕೆ ಮಗು ಶರತ್ ಅಜ್ಜಿ ಸರಸ್ವತಿ ಮನೆಯಲ್ಲಿ ಬೆಳೆದಿತ್ತು. ಸೆ.9ರಂದು ಶರತ್ ಹುಟ್ಟುಹಬ್ಬವನ್ನ ಕುಟುಂಬಸ್ಥರು ಅಜ್ಜಿ ಮನೆಯಲ್ಲೇ ಆಚರಿಸಿದ್ದರು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ತಂದೆಯ ಮನೆಗೆ ಮಗು ಶರತ್ ಬಂದಿತ್ತು.