ಮಾಣಿ, ಸೆ 19: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (SSF) ಸೂರಿಕುಮೇರು ಯುನಿಟ್ ಇದರ ವತಿಯಿಂದ ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ಸೆಪ್ಟೆಂಬರ್ 19 ಎಸ್ಸೆಸ್ಸೆಫ್ ಧ್ವಜ ದಿನ ಆಚರಣೆ ಎಸ್‌ವೈಎಸ್ ಮಾಣಿ ಸೆಂಟರ್ ನಾಯಕರಾದ ಯೂಸುಫ್ ಹಾಜಿ ಸೂರಿಕುಮೇರು ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಅಶ್ರಫ್ ಸಖಾಫಿ ಸೂರಿಕುಮೇರು ದುಃಆ ನೆರವೇರಿಸಿದರು.
ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಕಮಿಟಿ ಇದರ ಅಧ್ಯಕ್ಷರಾದ ನೆಲ್ಲಿ ಅಬ್ದುಲ್ ಕರೀಂ ಸೂರಿಕುಮೇರು ಧ್ವಜಾರೋಹಣ ಮಾಡಿದರು. ಮುಈನ್ ಮಾಣಿ ಸಂದೇಶ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಮಾಣಿ ಸೆಂಟರ್ ನಾಯಕರಾದ ಎಸ್ ಆರ್ ಸುಲೈಮಾನ್ ಸೂರಿಕುಮೇರು, ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ, ಅಬ್ದುಲ್ ಖಾದರ್ ಸೂರಿಕುಮೇರು, ಜಾಬಿರ್ ಸೂರಿಕುಮೇರು, ಅಜ್ಮಲ್ ಮಾಣಿ,ಹಾಫಿಳ್ ಅನಸ್ ಸೂರಿಕುಮೇರು, ಸವಾದ್ ಮಾಣಿ ಮುಂತಾದವರು ಉಪಸ್ಥಿತರಿದ್ದರು.ಎಸ್ಸೆಸ್ಸೆಫ್ ಸೂರಿಕುಮೇರು ಅಧ್ಯಕ್ಷರಾದ ಮುಬಶ್ಶಿರ್ ಸೂರಿಕುಮೇರು ಸ್ವಾಗತಿಸಿ, ಇಮ್ರಾನ್ ಸೂರಿಕುಮೇರು ಧನ್ಯವಾದಗೈದರು.