(ಸಾಂದರ್ಬಿಕ ಚಿತ್ರ)
ಕಟಿಹಾರ್: ವಿದ್ಯಾರ್ಥಿನಿಯೊಬ್ಬಳ ಜತೆ ಅನುಚಿತವಾಗಿ ವರ್ತಿಸಿದ ಶಾಲಾ ಮುಖ್ಯಶಿಕ್ಷಕನಿಗೆ ಸ್ಥಳೀಯರೆಲ್ಲ ಸೇರಿ ಗೂಸ ನೀಡಿದ ಘಟನೆ ಬಿಹಾರದ ಕಟಿಹಾರ ಜಿಲ್ಲೆಯ ಸೇಮಾಪುರ ಎಂಬಲ್ಲಿರುವ ಪಿಪ್ರಿ ಬಹಿಯಾರ್ ಎಂಬ ಪ್ರಾಥಮಿಕ ಶಾಲೆಯಲ್ಲಿ ನಡೆಡಿದೆ.
ಇಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ 12ವರ್ಷದ ಬಾಲಕಿಗೆ ಮುಖ್ಯಶಿಕ್ಷಕ ಕೆನ್ನೆಯ ಮೇಲೆ ಕಚ್ಚಿದ್ದ ಎನ್ನಲಾಗಿದೆ.ಮುಖ್ಯ ಶಿಕ್ಷಕ ಕಚ್ಚಿದ್ದರಿಂದ ಬಾಲಕಿ ಅಳಲು ಶುರು ಮಾಡಿದ್ದಳು. ಬಾಲಕಿಯ ಅಳುವಿನ ಶಬ್ದ ಕೇಳಿ ಅಲ್ಲೇ ಅಕ್ಕ-ಪಕ್ಕ ಇದ್ದವರೆಲ್ಲ ಓಡಿಬಂದಿದ್ದಾರೆ.

ಜನರನ್ನು ನೋಡುತ್ತಿದ್ದಂತೆ ಶಾಲೆಯ ಒಂದು ಕೋಣೆಗೆ ಹೋಗಿ ಲಾಕ್ ಮಾಡಿಕೊಂಡಿದ್ದ. ಆದರೆ ಸ್ಥಳೀಯ ಜನರು ಅವನನ್ನು ಬಿಡಲಿಲ್ಲ. ಪೊಲೀಸರಿಗೆ ಕರೆ ಮಾಡಿ, ತಾವೆಲ್ಲ ಶಾಲೆಯ ಹೊರಗೇ ಸುತ್ತುವರಿದು ನಿಂತಿದ್ದರು. ಪೊಲೀಸರು ಬಂದು ಮುಖ್ಯಶಿಕ್ಷಕನನ್ನು ಹೊರಗೆ ಕರೆದುತರುತ್ತಿದ್ದಂತೆ ಆತನ ಮೇಲೆ ಜನರು ದಾಳಿ ಮಾಡಿದ್ದಾರೆ. ಕೋಲು, ಬಡಿಗೆಗಳಿಂದ ಪೊಲೀಸರ ಎದುರೇ ಹೊಡೆದಿದ್ದಾರೆ.ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.