ಮಂಗಳೂರು: ಮಾಜಿ ಕೇಂದ್ರ ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರದ್ದು ಎನ್ನಲಾಗುತ್ತಿರುವ ಅಶ್ಲೀಲ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮಹೆಳೆಯೊಂದಿಗೆ ವೀಡಿಯೋ ಕಾಲ್ ಮೂಲಕ ಅಸಭ್ಯವಾಗಿ ಮಾತನಾಡುವ, ಅಶ್ಲೀಲ ವೀಡಿಯೋ ಕರೆಯ ದೃಶ್ಯ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಬಗ್ಗೆ ಫೇಸ್ಬುಕ್ ಮೂಲಕ ಸ್ಪಷ್ಟನೆ ನೀಡಿದ ಸದಾನಂದ ಗೌಡರು, ಈ ವೀಡಿಯೋದಲ್ಲಿರುವ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ. ಯಾರೋ ವಿರೋಧಿಗಳು ನನ್ನ ನಿಷ್ಪಕ್ಷಪಾಕ ವ್ಯಕ್ತಿತ್ವನ್ನು ಹಾಳು ಮಾಡಲು ಇದನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದ್ದಾರೆ.ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಆ ವೀಡಿಯೋ ಫಾರ್ವರ್ಡ್/ ಅಪ್ಲೋಡ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಿಳಿಸಿಲಾಗಿದೆ ಎಂದು ಸದಾನಂದ ಗೌಡರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಿಂಗಳುಗಳ ಹಿಂದೆ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಬಿಡುಗಡೆಯಾಗದಂತೆ ಸದಾನಂದವಗೌಡರವರು ನ್ಯಾಯಾಲಯದಿಂದ ತಡೆ ತಂದಿರುವುದು ಇಲ್ಲಿ ಉಲ್ಲೇಖಾರ್ಹ . ಇದೀಗ ಸದಾನಂದರ ಭಯದ ಹಿಂದಿನ ಅಸಲಿಯತ್ತು ಹೊರಬಂದಿದೆ ಎನ್ನಲಾಗಿದೆ . ಸದಾನಂದರ ಈ ‘ ಆನಂದ ‘ ದ ದೃಶ್ಯಗಳು ಮಾಜಿಮುಖ್ಯಮಂತ್ರಿಗಳ ಬಗ್ಗೆ ಅಸಹ್ಯ ಮೂಡಿಸುತ್ತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ .