ಬೆಂಗಳೂರು:-ಸೆ 21 ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯುಪಿ ಇಬ್ರಾಹಿಂ ಅವರಿಗೆ ಕಳೆದ ವಾರ ಲಘು ಹ್ರದಯಘಾತವಾಗಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಮಣಿಪಾಲ ಹಾಸ್ಪಿಟಲ್ ಗೆ ದಾಖಲುಮಾಡಲಾಗಿತ್ತು.
ಮಣಿಪಾಲ ಹಾಸ್ಪಿಟಲ್ ಇವತ್ತು ಭೇಟಿ ನೀಡಿದ ಮಾಜಿ ಆರೋಗ್ಯ ಮಂತ್ರಿಗಳಾದ ಯುಟಿ ಖಾದರ್ ಯುಪಿ ಇಬ್ರಾಹಿಂ ಅವರ ಅರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಮೋನು, ಗ್ರಾಮ ಪಂಚಾಯತ್ ಸದಸ್ಯರಾದ ಏಕೆ ಅಶ್ರಫ್ ಉಪಸ್ಥಿತರಿದ್ದರು. ನಂತರ ಮಾತನಾಡಿದ ಮಾಜಿ ಸಚಿವರು ಯುಪಿ ಇಬ್ರಾಹಿಂ ಅವರು ಆದಷ್ಟು ಬೇಗ ಗುಣಮುಖರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.