ಪುತ್ತೂರು, ಸೆ.22: ಬೈಕ್ ಮತ್ತು ಆಕ್ಟೀವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಪರ್ಲಡ್ಕ ಮಸೀದಿ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಪುತ್ತೂರಿನಿಂದ ಬುಳೇರಿಕಟ್ಟೆ ಕಡೆ ಹೋಗುತ್ತಿದ್ದ ಆಕ್ಟೀವಾಗೆ ಪರ್ಲಡ್ಕ ಜಂಕ್ಷನ್ನಲ್ಲಿ ಒಳ ರಸ್ತೆಯಿಂದ ಏಕಾಏಕಿ ಮುಖ್ಯ ರಸ್ತೆಗೆ ಬಂದ ಬೈಕ್ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಆಕ್ಟಿವಾದಲ್ಲಿದ್ದ ಮಹಿಳೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
