ಪುತ್ತೂರು, ಸೆ.24: ಕೊರೋನಾ ಸಂದರ್ಭದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನೈಜ್ಯ ಕಲಿಕೆಯಿಂದ ವಂಚಿತರಾಗಿದ್ದು, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಗಳು ರಾಜ್ಯದಾದ್ಯಂತ ಕೈಗೊಂಡ ವಿದ್ಯಾ ಸೇತು ಯೋಜನೆಯ ಅಡಿಯಲ್ಲಿ ರೋಟರಿ ಪುತ್ತೂರು ಸೆಂಟ್ರಲ್ ಪುತ್ತೂರಿನಲ್ಲಿ ಆಯ್ದ ಕನ್ನಡ ಮಾದ್ಯಮದ ಹೈಸ್ಕೂಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಸುಲಭ ವಿಧಾನದ ಕಲಿಕೆಗಾಗಿ ಪ್ರತೀ ವಿದ್ಯಾರ್ಥಿಗೆ 2 ಪುಸ್ತಕಗಳನ್ನು ವಿತರಿಸುವ ಕಾರ್ಯವನ್ನು ಕೈಗೊಂಡಿತು.
ರೋಟರಿ ಪುತ್ತೂರು ಸೆಂಟ್ರಲ್ ವತಿಯಿಂದ ಸವಣೂರು ಸರಕಾರಿ ಪ್ರೌಡ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕಾರ್ಯವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಶಾಲಾಭಿವ್ರದ್ಧಿ ಸಮಿತಿ ಸದಸ್ಯರಾದ ರೋ ಕೃಷ್ಣ ಕುಮಾರ್ ರೈ , ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ ,ಸವಣೂರು ಪಂಚಾಯತ್ ಸದಸ್ಯರು ಕಾಲೇಜು ಅಭಿವ್ರದ್ಧಿ ಸಮೀತಿಯ ಶ್ರೀ ಗಿರಿಶಂಕರ್ ಸುಲಾಯ, ಆಂಗ್ಲ ಉಪನ್ಯಾಸಕರಾದ ಶ್ರೀ ಬಿ.ವಿ.ಸೂರ್ಯ ನಾರಾಯಣ, ಹಿರಿಯ ಪಧವೀದರ ಶಿಕ್ಷಕರಾದ ಶ್ರೀ ರಘು ಬಿ ಆರ್,ಪುತ್ತೂರು ರೋಟರಿ ಸೆಂಟ್ರಲ್ ಅದ್ಯಕ್ಷರಾದ ರೋ ನವೀನ್ ಚಂದ್ರ ನಾಯ್ಕ್, ನಿಯೋಜಿತ ಅದ್ಯಕ್ಷರಾದ ರೋ.ರಫೀಕ್ ದರ್ಬೆ, ಅಂತಾರಾಷ್ಟ್ರೀಯ ನಿರ್ದೇಶಕ ರೋ ಸನತ್ ರೈ, ಮೆಂಬರ್ಶಿಪ್ ಡೆವಲಪ್ ಮೆಂಟ್ ಚೆರ್ಮೆನ್ ರೋ ಅಶೋಕ್ ನಾಯ್ಕ್, ಕಮ್ಯುನಿಟಿ ಸರ್ವಿಸ್ ಚೇರ್ಮೆನ್ ರೋ ಅಶ್ರಪ್ ಮುಕ್ವೆ ಬಾಗವಹಿಸಿದರು.
ದೈಹಿಕ ಶಿಕ್ಷಕರಾದ ಕಿಶನ್ ರವರು ಕಾರ್ಯಕ್ರಮ ನಿರೂಪಿಸಿದರು.