ಶ್ವಾನ ಪ್ರೀತಿ ಮನುಷ್ಯರಿಗೆ ಬಹಳ ಹೆಚ್ಚು. ನಾಯಿ ಇಷ್ಟಪಡುವ ಜನರು ತುಂಬಾ ಮಂದಿ. ವಿವಿಧ ತಳಿಯ, ವಿವಿಧ ಬಗೆಯ ನಾಯಿಯ ವಿಡಿಯೋಗಳು, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದು ಕೂಡ ಸಹಜವೇ ಆಗಿದೆ. ಅಂತಹ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ನಾಯಿಯೊಂದು ಬಾಯಾರಿದಾಗ ಒಬ್ಬಾತ ತನ್ನ ಬೊಗಸೆಯಲ್ಲಿ ನೀರು ಹಿಡಿದು ನಾಯಿಗೆ ಕುಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಮನ ಗೆದ್ದಿದೆ.
ವಿಡಿಯೋದಲ್ಲಿ ನೋಡುವಂತೆ, ನಾಯಿ ನಿಧಾನಕ್ಕೆ ಬೊಗಸೆಯಿಂದ ನೀರು ಕುಡಿಯುತ್ತದೆ. ಹಾಗೂ ನೀರು ಖಾಲಿ ಆದಾಗ ಮತ್ತೆ ಕೈಯಲ್ಲಿ ನೀರು ತೆಗೆದು ನಾಯಿಗೆ ಕುಡಿಸುತ್ತಾನೆ. ನಾಯಿ ಮತ್ತೆ ಮತ್ತೆ ನೀರು ಕೇಳುತ್ತಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.
“Life is an exciting business, and most exciting when it is lived for others.”― Helen Keller pic.twitter.com/vscAVUKQJM
— Susanta Nanda (@susantananda3) September 23, 2021
ಈ ವಿಡಿಯೋವನ್ನು ಐಎಫ್ಎಸ್ ಆಫೀಸರ್ ಒಬ್ಬರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಜೀವನವನ್ನು ಬೇರೆಯವರಿಗಾಗಿ ಜೀವಿಸಿದಾಗ ಬದುಕು ಹೆಚ್ಚು ಸಂತೋಷದಾಯಕ ಆಗಿರುತ್ತದೆ ಎಂಬಂತೆ ಬರೆದುಕೊಂಡಿದ್ದಾರೆ.