ಪುತ್ತೂರು: ಪುತ್ತೂರಿನ ಕೂರ್ನಡ್ಕ ಸಮೀಪದ ಮರೀಲ್ ನಿವಾಸಿಯಾಗಿರುವ ಶಕೀಲ್ ರವರ ತಂದೆ ಹಾಗೂ ದರ್ಬೆ ಮರ್ಹೂಮ್ ಪಿ.ಮುಹಮ್ಮದ್ ಹಟ್ಟಾ ರವರ ತಮ್ಮ ದರ್ಬೆ ಪಿ.ಯಾಕೂಬ್ ಹಾಜಿಯವರು ಅಲ್ಪದಿನದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ಪುತ್ತೂರಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಮಾಜಿ ಉಪಾಧ್ಯಕ್ಷರೂ, ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಮಾಜಿ ಉಪಾಧ್ಯಕ್ಷರೂ, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ನ ಮಾಜಿ ಸದಸ್ಯರೂ ಅಗಿರುವ ಯಾಕೂಬ್ ಹಾಜಿಯವರು ಅನಾರೋಗ್ಯ ನಿಮಿತ್ತ ಮಂಗಳೂರಿನ ಪಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.